ವಿಧಾನಸೌಧದಲ್ಲಿ ಹೊಡಿ-ಬಡಿ,  ರಾಜೀನಾಮೆ ಕೊಟ್ಟ ಸುಧಾಕರ್‌ಗೆ ದಿಗ್ಬಂಧನ

By Web DeskFirst Published Jul 10, 2019, 5:57 PM IST
Highlights

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಅವರಿಗೆ ದಿಗ್ಬಂದನ ಹಾಕಲಾಗಿದೆ. ರಾಜೀನಾಮೆ ನೀಡಿ ಹೊರಬರುತ್ತಿದ್ದೆಂತೆ ಸುಧಾಕರ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಎಗರಿ ಬಿದ್ದಿದ್ದರು.

ಬೆಂಗಳೂರು[ಜು. 10] ವಿಧಾನದೌಧದಲ್ಲಿ ಹೈಡ್ರಾಮಾ ನಡೆದು ಹೋಗಿದೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಪೊಲೀಸ್ ಗಾರ್ಡ್ ಗಳನ್ನು ಮೀರಿ ಮುಂದಕ್ಕೆ ನುಗ್ಗಿ ಬಂದಿದ್ದರು. ಗೂಳಿಹಟ್ಟಿ ಶೇಖರ್ ಶರ್ಟ್ ಹರಿದುಕೊಂಡಿದ್ದು ಕಳಂಕವಾಗಿ ನಿಂತೆ ಬಿಟ್ಟಿತ್ತು.

ಇದೀಗ ಮತ್ತೆ ಅಂತಹದೆ ಒಂದು ಘಟನೆ ನಡೆದುಹೋಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಕಚೇರಿಯಿಂದ ಹೊರಬಂದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಅವರನ್ನು ತಳ್ಳಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಎದುರಿಗೆ ಘಟನಾವಳಿಗಳು ನಡೆದುಹೋಗಿವೆ.

ಇದಾದ ಮೇಲೆ ಸುಧಾಕರ್ ಅವರನ್ನು ವಿಧಾನಸೌಧದ 3 ನೇ ಮಹಡಿಯಲ್ಲಿರುವ ಕೆ.ಜೆ. ಜಾರ್ಜ್ ಅವರ ಕಚೇರಿಗೆ ಕರೆದುಕೊಂಡು ಹೋಗಿ  ಕುಳ್ಳಿರಿಸಲಾಗಿದ್ದು ಅಲ್ಲಿಗೆ ಆಗಮಿಸಿರುವ ಸಿದ್ದರಾಯ್ಯ ಮಾತುಕತೆ ನಡೆಸುತ್ತಿದ್ದಾರೆ. ಸುಧಾಕರ್ ಅವರನ್ನು ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ, ವಿಧಾನಸೌಧ ಸೌಧ ಉಳಿಸಿ  ಎಂದು ಬಿಜೆಪಿ ನಾಯಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

"

click me!