
ಬೆಂಗಳೂರು(ಡಿ.19): ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಮನೆಯ ಜಗಳ ಮತ್ತೆ ಬೀದಿಗೆ ಬಂದಿದೆ. ನಿನ್ನೆ ತಡರಾತ್ರಿ ಕುಮಾರಸ್ವಾಮಿ ಪತ್ನಿ ಸವಿತಾ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಮನೆಯಲ್ಲಿ ಘಟನೆ ನಡೆದಿದ್ದು ಸವಿತಾ ಮನೆಮುಂದೆ ಧರಣಿ ನಡೆಸಿದ್ದಾಳೆ. ಸವಿತಾ ಗಂಡನ ಅನೈತಿಕತೆಯನ್ನು ಪ್ರಶ್ನಿಸಿದ್ದಳು ಅದು ತಾರಕಕ್ಕೇರಿ ಹೆಚ್ ಎಸ್ ಆರ್ ಲೇಔಟ್'ನ ಮನೆಯಲ್ಲಿ ಗಲಾಟೆ ಆಗಿದೆ. ಆಗ ನನ್ನ ಅನೈತಿಕತೆ ಬಗ್ಗೆ ಪ್ರಶ್ನಿಸಬೇಡ, ನಾನು ಯಾರ ಜೊತೆ ಸಂಪರ್ಕದಲ್ಲಿದ್ದರೂ ನೀನು ಕೇಳಬೇಡ, ಸುಮ್ನೆ ಜೊತೆಗಿರು ಎಂದು ಮಾಜಿ ಶಾಸಕ ಕುಮಾರಸ್ವಾಮಿ ಕ್ಯಾತೆ ತೆಗೆದಿದ್ದಾರೆ. ಈ ಜಗಳ ತಾರಕಕ್ಕೇರಿ ನಿನ್ನೆ ಆತ ತನ್ನ ಪತ್ನಿಯನ್ನು ಹೊರಹಾಕಿದ್ದಾನೆ.
ಇದನ್ನು ವಿರೋಧಿಸಿ ಸವಿತಾ ರಾತ್ರಿಯಿಡೀ ಮನೆ ಮುಂದೆ ಧರಣಿ ನಡೆಸಿದ್ದಾಳೆ. ಈ ಹಿಂದೆಯೂ ಕೂಡ ವಿಧಾನಸೌಧದ ಶಾಸಕರ ಭವನದ ಬಳಿ ಇವರ ಜಗಳ ಬೀದಿಗೆ ಬಂದು ಕುಮಾರಸ್ವಾಮಿ ಸವಿತಾ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದರು. ನಂತರ ಈ ಪ್ರಕರಣ ಪೊಲೀಸ್ ಆಯುಕ್ತರ ಕಚೇರಿ ತನಕ ಹೋಗಿ ಮಧ್ಯಸ್ಥಿಕಾ ಕೇಂದ್ರದಲ್ಲಿ ಗಂಡ-ಹೆಂಡತಿ ಒಂದಾಗಿದ್ದರು. ಆದರೆ ಇದೀಗ ಮತ್ತೆ ಜಗಳತಾರಕಕ್ಕೇರಿ ಸವಿತಾ ರಾತ್ರಿಯಿಡೀ ಮನೆ ಮುಂದೆ ಧರಣಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.