ಹೆಚ್'ಡಿ ಕುಮಾರಸ್ವಾಮಿಗೆ ಜಮೀರ್ ಟಾಂಗ್: ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಸಮಾವೇಶಕ್ಕೆ ಪ್ಲಾನ್

Published : Dec 19, 2016, 02:43 AM ISTUpdated : Apr 11, 2018, 12:57 PM IST
ಹೆಚ್'ಡಿ ಕುಮಾರಸ್ವಾಮಿಗೆ ಜಮೀರ್ ಟಾಂಗ್: ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಸಮಾವೇಶಕ್ಕೆ ಪ್ಲಾನ್

ಸಾರಾಂಶ

ಜೆಡಿಎಸ್ ಪಕ್ಷದಲ್ಲಿ ಒಂದಿಷ್ಟು ಬದಲಾವಣೆಗಳಾಗಿದ್ರು ಸಹ ಮನಸ್ಥಾಪ ಮಾತ್ರ ಶಮನವಾಗಿಲ್ಲ. ಅಮಾನತುಗೊಂಡಿರುವ ಶಾಸಕ ಜಮೀರ್ ಅಹ್ಮದ್ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಜನವರಿ ಮೊದಲ ವಾರದಲ್ಲಿ ಅಲ್ಪಸಂಖ್ಯಾತ ಜಾಗೃತಿ ಸಮಾವೇಶ ನಡೆಸಲು ಹುಬ್ಬಳ್ಳಿಯನ್ನ ಆಯ್ಕೆ ಮಾಡಿದ್ದಾರೆ.

ಹುಬ್ಬಳ್ಳಿ(ಡಿ.19): ಜೆಡಿಎಸ್ ಪಕ್ಷದಲ್ಲಿ ಒಂದಿಷ್ಟು ಬದಲಾವಣೆಗಳಾಗಿದ್ರು ಸಹ ಮನಸ್ಥಾಪ ಮಾತ್ರ ಶಮನವಾಗಿಲ್ಲ. ಅಮಾನತುಗೊಂಡಿರುವ ಶಾಸಕ ಜಮೀರ್ ಅಹ್ಮದ್ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಜನವರಿ ಮೊದಲ ವಾರದಲ್ಲಿ ಅಲ್ಪಸಂಖ್ಯಾತ ಜಾಗೃತಿ ಸಮಾವೇಶ ನಡೆಸಲು ಹುಬ್ಬಳ್ಳಿಯನ್ನ ಆಯ್ಕೆ ಮಾಡಿದ್ದಾರೆ.

ಸದ್ಯದ ಮಟ್ಟಿಗಿನ ಕಾಂಗ್ರೆಸ್ ಆಡಳಿತ ರಾಜ್ಯದ ಜನತೆಗೆ ಹೇಸಿಗೆ ಹುಟ್ಟಿಸಿದೆ. ಇನ್ನೂ ಕೇಂದ್ರದಲ್ಲಿ ಮೋದಿ ಆಡಳಿತ ಜನ ಪ್ರೀತಿಗೆ ಪಾತ್ರವಾಗಿದ್ದರೂ ರಾಜ್ಯದಲ್ಲಿ ಹಿಂದಿನ ಬಿಜೆಪಿ ಆಡಳಿತವನ್ನ ಜನರೇ ತಿರಸ್ಕರಿಸಿದ್ದಾರೆ. ಇದೇ ಒಳ್ಳೆ  ಸಮಯ ಎಂದುಕೊಂಡ ಜೆಡಿಎಸ್ ಮುಂಬರುವ ವಿಧಾನಸಭಾ ಚುನಾವಣೆ ಗೆಲುವಿಗೆ ಈಗಾಗಲೇ ಸಿದ್ಧತೆ ನಡೆಸಿದೆ. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದತ್ತ ಚಿತ್ತಹರಿಸಿ, ಅಲ್ಲಿಯೇ ವಾಸ್ತವ್ಯಕ್ಕೆ ಹೊಸ ಮನೆಯನ್ನೇ ಮಾಡಿಕೊಂಡಿದ್ದಾರೆ. ಆದರೆ ಈಗ  ಶಾಸಕ ಜಮೀರ್  ಅಂಡ್ ಟೀಂ ಉತ್ತರ ಕರ್ನಾಟಕದಲ್ಲಿ ಎಚ್'​ಡಿಕೆಯವರಿಗೆ ಟಾಂಗ್ ನೀಡಲು ಮುಂದಾಗಿದೆ. ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಜಾಗ್ರತಿ ಸಮಾವೇಶ ನಡೆಸಿ ಟಾಂಗ್ ಕೊಡಲು ಹೊರಟಿದೆ. ಇದಕ್ಕೆ ಕಾರಣ ಏನು ಗೊತ್ತಾ?

ಅವತ್ತು ಜೆಡಿಎಸ್​ನಿಂದ ಅಮಾನತಾದ 8 ಮಂದಿಯಲ್ಲಿ ಮಹಾಲಕ್ಷ್ಮೀ ಲೇಔಟ್​ ಶಾಸಕ ಗೋಪಾಲಯ್ಯ ಮೇಲೆ  ಮಾತ್ರ ಎಚ್​ಡಿಕೆ ಅವ್ರಿಗೆ ಮೃದು ಧೋರಣೆ ಯಾಕೆ. ನಾವೆಲ್ಲ ಏನ್ಮಾಡಿದ್ದೇವೆ. ನಮ್ಮನ್ನ ಆಗ ಬಳಸಿಕೊಂಡು ಈಗ ಕೈಬಿಡ್ತಾರೆ. ನಮ್ಮ ಅಲ್ಪಸಂಖ್ಯಾತರಲ್ಲಿ ಅರಿವು ಮೂಡಿಸಲು. ನಮ್ಮಲ್ಲಿ ಒಗ್ಗಟ್ಟು ಮೂಡಿಸಲೆಂದೇ ಈ ಸಮಾವೇಶ ಎನ್ನುತ್ತಿದ್ದಾರೆ ಶಾಸಕ ಜಮೀರ್ ಅಹಮದ್

ಜನವರಿ ಮೊದಲ ವಾರದಲ್ಲಿ  ಸಮಾವೇಶಕ್ಕೆ ನಿರ್ಧರಿಸಿದ್ದು, ಹುಬ್ಬಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದೂ ಆಗಿದೆ. ಜನವರಿ 5 ರಂದು ಈ ಕುರಿತು ಅಂತಿಮ ಸಭೆ ನಡೆಯಲಿದೆ. ಇನ್ನೂ ಸಮಾವೇಶದಲ್ಲಿ ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಸೇರಿದಂತೆ 7 ಶಾಸಕರು ಭಾಗಿಯಾಗ್ತಿದ್ದಾರೆ.. ಅಲ್ಲಿಗೆ ಉತ್ತರ ಕರ್ನಾಟಕದಲ್ಲಿ ಭದ್ರ ಕೋಟೆ ತೆರೆಯಲು ಹೊರಟ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ  ಸರಿಯಾಗೇ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ ಎನ್ನುವುದು ಖಚಿತ. ಇದಕ್ಕೆ ಎಚ್​ಡಿಕೆ ನಿರ್ಧಾರವೇನು ಎನ್ನುವುದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150
ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ: ಸಚಿವ ಶಿವರಾಜ ತಂಗಡಗಿ