
ಮಡಿಕೇರಿ(ಡಿ.19): ಮಡಿಕೇರಿ ದಿಡ್ಡಹಳ್ಳಿಯ ಆದಿವಾಸಿಗಳ ಆರ್ತನಾದ ಇಂದೂ ಕೂಡ ಮುಂದುವರೆದಿದೆ. ನಿನ್ನೆ ಇಡೀ ದಿನ ರಸ್ತೆಯಲ್ಲೇ ಕೂತು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ಇಂದೂ ಕೂಡಾ ಆದಿವಾಸಿ ಜನರ ಧರಣಿ ಮುಂದುವರೆದಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಯಾವೊಬ್ಬ ಜನಪ್ರತಿನಿಧಿ ಆದಿವಾಸಿಗರ ಸಮಸ್ಯೆಯನ್ನೂ ಇದುವರೆಗೂ ಆಲಿಸಿಲ್ಲ.
ಸಂಸದ ಪ್ರತಾಪ್ ಸಿಂಹ ದಿಡ್ಡಹಳ್ಳಿ ಆದಿವಾಸಿಗಳ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದಿಡ್ಡಳ್ಳಿಲ್ಲಿ ಯಾವುದೇ ಕಾರಣಕ್ಕೂ ಜಾಗ ಕೊಡಲು ಸಾಧ್ಯವಿಲ್ಲ. ದುಬಾರೆಯಲ್ಲಿ ಡಿನೋಟಿಫೈ ಮಾಡಿದ ಭೂಮಿ ಇದೆ ಅಲ್ಲಿ ಬೇಕಾದರೆ ಪುನರ್ ವಸತಿ ಕಲ್ಪಿಸಬಹುದು ಅಂತಾ ಹೇಳಿದ್ದಾರೆ.
ಇನ್ನು ಆದಿವಾಸಿಗರ ಹೋರಾಟಕ್ಕೆ ಬೆಂಬಲ ನೀಡಿದ ಹಿರಿಯ ಸಾಹಿತಿ ಭಾಗವಾನ್ ಧರಣಿಯಲ್ಲಿ ಭಾಗಿಯಾಗಿದ್ದರು. ಮತ್ತೊಂದೆಡೆ ಆದಿವಾಸಿಗರ ಪರ ಹೋರಾಟಗಾರರೂ ಇಂದೂ ಕೂಡಾ ದಿಡ್ಡಹಳ್ಳಿಯಲ್ಲೇ ಬೀಡುಬಿಟ್ಟಿದ್ದು , ಅವರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅರಣ್ಯವಾಸಿಗರಿಗೆ ಸರ್ಕಾರ ಕೂಡಲೇ ಪುನರ್ವವಸತಿ ಕಲ್ಪಿಸಬೇಕು ಅಂತಾ ಆದಿವಾಸಿಗಳ ಪರ ಹೋರಾಟಗಾರ ಅಪ್ಪಾಜಿ ಆಗ್ರಹಿಸಿದರು.
ಸರ್ಕಾರದ ನೀತಿ ಖಂಡಿಸಿ ಹೋರಾಟಗಾರ್ತಿ ಮಲ್ಲಮ್ಮ ಬೆತ್ತಲೆ ಪ್ರತಿಭಟನೆ ಮಾಡಿದ್ದರು. ಆದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಆದಿವಾಸಿಗರನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಿದ್ದಾರೆ. ಈದೀಗ ಅವರಿಗೆ ಸೂಕ್ತ ಪುನರ್ವವಸತಿ ಕಲ್ಪಿಸದೇ, ಮೀನಮೇಷ ಎಣಿಸುತ್ತಾ, ನಿರಾಶ್ರಿತರ ಜೊತೆ ಆಟವಾಡುತ್ತಿದೆ. ಇವರ ಹೋರಾಟ ಉಗ್ರ ರೂಪ ಪಡೆದುಕೊಳ್ಳುವ ಮುನ್ನ ಸರ್ಕಾರ ಎಚ್ಚೆತ್ತು ಕೊಳ್ಳಬೇಕಿದೆ. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.