
ಬೆಂಗಳೂರು: ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರಮುಖ ನಗರವಾಗಿರುವ ಕೇಪ್ ಟೌನ್ ಕುಡಿಯುವ ನೀರಿನ ಅಭಾವದ ಕಾರಣಕ್ಕೆ ಭಾರೀ ಸದ್ದು ಮಾಡಿತ್ತು.
ಇದೀಗ ಬಿಬಿಸಿಯು ಶೀಘ್ರದಲ್ಲೇ ಕುಡಿಯುವ ನೀರಿನ ಅಭಾವವನ್ನು ಎದುರಿಸಲಿರುವ 11 ಜಾಗತಿಕ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆ ವರದಿಯ ಪ್ರಕಾರ ಭಾರತದ ನಗರಗಳ ಪೈಕಿ ಬೆಂಗಳೂರಿನ ಹೆಸರನ್ನು ಕೂಡಾ ಬಿಬಿಸಿ ಪಟ್ಟಿ ಮಾಡಿದೆ.
ಜಾಗತಿಕ ಭೂಪಟದಲ್ಲಿ ತಂತ್ರಜ್ಞಾನ ಹಾಗೂ ಐಟಿ ಹಬ್ ಆಗಿ ಬೆಳೆದಿರುವ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಅರ್ಧದಷ್ಟು ಕುಡಿಯುವ ನೀರು ಪೋಲಾಗುತ್ತಿದೆ, ಹಾಗೂ ಜಲ ಮಾಲಿನ್ಯ ಹೆಚ್ಚಾಗಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆಯೆಂದು ವರದಿಯು ಹೇಳಿದೆ.
ನಗರದ ಶೇ. 85 ಕೆರೆ ನೀರು, ಕೃಷಿ ಹಾಗೂ ಕೈಗಾರಿಕಾ ಬಳಕೆಗೆ ಮಾತ್ರ ಸೂಕ್ತವಾಗಿದೆ. ನಗರದ ಒಂದೇ ಒಂದು ಕೆರೆಯ ನೀರು ಕೂಡಾ ಕುಡಿಯಲು ಅಥವಾ ಸ್ನಾನಕ್ಕೆ ಬಳಸಲು ಯೋಗ್ಯವಾಗಿಲ್ಲ, ಎಂದು ವರದಿಯು ಹೇಳಿದೆ.
ಇತರ ನಗರಗಳು:
ಬ್ರೆಝಿಲ್’ನ ವಾಣಿಜ್ಯ ನಗರಿ ಸಾವೋ ಪೌಲೋ
ಚೀನಾ ರಾಜಧಾನಿ ಬೀಜಿಂಗ್
ಈಜಿಪ್ಟ್ ರಾಜಧಾನಿ ಕೈರೋ
ಇಂಡೋನೆಶಿಯಾ ರಾಜಧಾನಿ ಜಕಾರ್ತ
ಮಾಸ್ಕೋ, ರಷ್ಯಾ
ಇಸ್ತಾಂಬುಲ್, ಟರ್ಕಿ
ಮೆಕ್ಸಿಕೋ ಸಿಟಿ
ಲಂಡನ್
ಟೋಕಿಯೋ
ಮಿಯಾಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.