ನೆಹರೂ ವಿರುದ್ಧ ವಾಗ್ದಾಳಿ: ಮೋದಿಗೆ ವಿಶಿಷ್ಟ ರೀತಿಯಲ್ಲಿ ಟಾಂಗ್ ನೀಡಿದ ರಾಹುಲ್ ಗಾಂಧಿ

Published : Feb 11, 2018, 04:12 PM ISTUpdated : Apr 11, 2018, 01:09 PM IST
ನೆಹರೂ ವಿರುದ್ಧ ವಾಗ್ದಾಳಿ: ಮೋದಿಗೆ ವಿಶಿಷ್ಟ ರೀತಿಯಲ್ಲಿ ಟಾಂಗ್ ನೀಡಿದ ರಾಹುಲ್ ಗಾಂಧಿ

ಸಾರಾಂಶ

ಜವಾಹರ್ ಲಾಲ್ ನೆಹರೂ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಗೃಹಮಂತ್ರಿ ರಾಜನಾಥ್ ಸಿಂಗ್  ಮಾಡಿರುವ ಭಾಷಣ ಸತ್ಯವನ್ನು ಹೇಳಿರುವುದಕ್ಕೆ  ಧನ್ಯವಾದಗಳು ರಾಜನಾಥ್ ಸಿಂಗ್ ಅವರೇ, ಸತ್ಯಮೇವ ಜಯತೇ’ ಎಂದು ರಾಹುಲ್ ಗಾಂಧಿ ಟ್ವೀಟ್

ನವದೆಹಲಿ: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿರುವುದಕ್ಕೆ ರಾಹುಲ್ ಗಾಂಧಿ ವಿಭಿನ್ನವಾಗಿ ತಿರುಗೇಟು ನೀಡಿದ್ದಾರೆ.

ಜವಾಹರ್ ಲಾಲ್ ನೆಹರೂ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಗೃಹಮಂತ್ರಿ ರಾಜನಾಥ್ ಸಿಂಗ್  ಮಾಡಿರುವ ಭಾಷಣವನ್ನು ಉಲ್ಲೇಖಿಸಿ, ‘ ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳಿರುವುದಕ್ಕೆ  ಧನ್ಯವಾದಗಳು ರಾಜನಾಥ್ ಸಿಂಗ್ ಅವರೇ, ಸತ್ಯಮೇವ ಜಯತೇ’ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ನೆಹರೂ ಜನ್ಮದಿನದ ಅಂಗವಾಗಿ ನವಂಬರ್ 14, 2015ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಾಜನಾಥ್ ಸಿಂಗ್, ಭಾರತಕ್ಕೆ ನೆಹರೂ ಕೊಟ್ಟಿರುವ ಕೊಡುಗೆಗಳನ್ನು ಕೊಂಡಾಡಿದ್ದಾರೆ.

ಕಳೆದ ಬುಧವಾರ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಪ್ರಧಾನಿ ಮೋದಿ ತಮ್ಮ  ಭಾಷಣದುದ್ದಕ್ಕೂ ನೆಹರೂ ಹಾಗೂ ಕಾಂಗ್ರೆಸ್’ನ್ನು ಟೀಕಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

World Cancer Day 2026 ಭಾರತದಲ್ಲಿ ವರ್ಷದಲ್ಲಿ 14.1 ಲಕ್ಷ ಕ್ಯಾನ್ಸರ್‌ ಪ್ರಕರಣ ಪತ್ತೆ!
Vijayapura: ಮಗಳೇ ಮನೆಗೆ ಬಾರಮ್ಮಾ ಅಂದ್ರೆ ನಾನು ಮೊಹಮ್ಮದ್ ಸಲೀಂನ ಹೆಂಡ್ತಿ ಎಂದ ನಿಶಾ