ಗುಹೆಯೊಳಗೆ ಸಿಲುಕಿದ್ದ ಥಾಯ್‌ ಬಾಲಕರು ಇನ್ನೂ 3-4 ತಿಂಗಳು ಹೊರಬರುವುದು ಕಷ್ಟ!

Published : Jul 04, 2018, 09:25 AM IST
ಗುಹೆಯೊಳಗೆ ಸಿಲುಕಿದ್ದ ಥಾಯ್‌  ಬಾಲಕರು ಇನ್ನೂ 3-4 ತಿಂಗಳು ಹೊರಬರುವುದು ಕಷ್ಟ!

ಸಾರಾಂಶ

ಗುಹೆಯೊಳಗೆ ಸಿಲುಕಿದ್ದ ಥಾಯ್‌  ಬಾಲಕರು ಇನ್ನೂ 3-4 ತಿಂಗಳು ಹೊರಬರುವುದು ಕಷ್ಟವಾಗಲಿದೆ.  ಅಷ್ಟರವರೆಗೆ ಅವರಿಗೆ ಗುಹೆಯೊಳಗೇ ಇರಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 

ಬ್ಯಾಂಕಾಕ್‌: ಥಾಯ್ಲೆಂಡ್‌ನ ಮಾಯೆಸಾಯ್‌ ಎಂಬಲ್ಲಿ ಒಂಬತ್ತು ದಿನಗಳ ಹಿಂದೆ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ 12 ಬಾಲಕರ ಫುಟ್ಬಾಲ್‌ ತಂಡ ಮತ್ತು ಅವರ ಕೋಚ್‌ ಗುಹೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ. 

ಆದರೆ, ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ತಂಡವನ್ನು ಗುಹೆಯಿಂದ ಹೊರತರಲು ಕನಿಷ್ಠ 3-4 ತಿಂಗಳು ಬೇಕಾಗಬಹುದಾದುದರಿಂದ, ಅಷ್ಟರವರೆಗೆ ಅವರಿಗೆ ಗುಹೆಯೊಳಗೇ ಇರಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 

ಕಿ.ಮೀ.ಗಳಷ್ಟುಉದ್ದದ ಗುಹೆಯಲ್ಲಿ ನೀರು ಆವರಿಸಿದ್ದು, ಬಾಲಕರಿಗೆ ಈಜು ಬಾರದ ಕಾರಣ ಅವರನ್ನು ಹೊರ ತರುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ತಂಡಕ್ಕೆ ತಿಂಗಳುಗಳಿಗೆ ಬೇಕಾದಷ್ಟುಆಹಾರ, ಔಷಧಿ, ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ. 

ಬಾಲಕರಿಗೆ ಈಜು ತರಬೇತಿ ನೀಡಲು ಥಾಯ್‌ ಸೇನೆ ಮುಂದಾಗಿದೆ. ರಕ್ಷಣಾ ಸಿಬ್ಬಂದಿ ಬಾಲಕರೊಂದಿಗೆ ಮಾತನಾಡಿರುವ ವೀಡಿಯೊ ಪ್ರಕಟವಾಗಿದ್ದು, ಅವರ ಸುರಕ್ಷಿತ ಹಿಂದಿರುಗುವಿಕೆಗೆ ಪ್ರಾರ್ಥಿಸಿದ್ದ ಥಾಯ್ಲೆಂಡ್‌ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!