ಕ್ರಿಕೆಟಿಗ ಕೊಹ್ಲಿ, ಪ್ರಧಾನಿ ಮೋದಿ, ಶಾಗೆ ಉಗ್ರರ ಬೆದರಿಕೆ ಪತ್ರ

By Kannadaprabha News  |  First Published Oct 30, 2019, 7:42 AM IST

'ಅಖಿಲ ಭಾರತ ಲಷ್ಕರ್‌ ಎ ತೊಯ್ಬಾ' ಹಿಟ್ ಲಿಸ್ಟ್‌ನಲ್ಲಿ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವರು ಸೇರಿ ಹಲವುರ ಗಣ್ಯರಿದ್ದಾರೆ. ಇವರಿಗೆ ಉಗ್ರರ ಪತ್ರವೂ ಬಂದಿದೆ. ಅಷ್ಟಕ್ಕೂ ಈ ಪತ್ರ ಬಂದಿದ್ದು ಎಲ್ಲಿಂದ, ಟಾರ್ಗೆಟ್ ಹೇಗೆ?


ನವದೆಹಲಿ (ಅ.30): ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಕಾಶ್ಮೀರದ ನಿರ್ಗಮಿತ ರಾಜ್ಯಪಾಲ ಸತ್ಯಪಾಲ ಮಲಿಕ್‌ ಅವರು ‘ಅಖಿಲ ಭಾರತ ಲಷ್ಕರ್‌ ಎ ತೊಯ್ಬಾ’ ಹಿಟ್‌ಲಿಸ್ಟ್‌ನಲ್ಲಿದ್ದಾರೆ ಎಂಬ ಆತಂಕಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲ, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಭಾರತ ತಂಡದ ಆಟಗಾರರ ಮೇಲೂ ದಾಳಿ ನಡೆಸಲು ಲಷ್ಕರ್‌ ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಕ್ರಿಕೆಟಿಗರೊಬ್ಬರ ಹೆಸರು ಉಗ್ರರ ಹಿಟ್‌ಲಿಸ್ಟ್‌ನಲ್ಲಿ ನಮೂದಾಗಿರುವುದು ಇದೇ ಮೊದಲು.

Latest Videos

ರಾಜ್ಯದ ಇಬ್ಬರು ರಾಜಕಾರಣಿಗಳ ಹತ್ಯೆಗೆ ಸ್ಕೆಚ್

ಭಾರತದ ತನಿಖಾ ಸಂಸ್ಥೆ ‘ರಾಷ್ಟ್ರೀಯ ತನಿಖಾ ದಳ’ಕ್ಕೆ (ಎನ್‌ಐಎ) ಅಖಿಲ ಭಾರತ ಲಷ್ಕರ್‌ ಎ ತೊಯ್ಬಾದ ಉನ್ನತ ಸಮಿತಿ ಹೆಸರಿನಲ್ಲಿ ಪತ್ರವೊಂದು ಬಂದಿದ್ದು, ಇದರಲ್ಲಿ ಭಾರತದ ರಾಜಕಾರಣಿಗಳು ಹಾಗೂ ಕೊಹ್ಲಿ ಹೆಸರು ಇದೆ ಎಂದು ಮೂಲಗಳು ಹೇಳಿವೆ. ಕೇರಳದ ಕಲ್ಲಿಕೋಟೆಯಿಂದ ಈ ಪತ್ರ ಬರೆಯಲಾಗಿದೆ ಎಂದು ನಮೂದಿಸಲಾಗಿದೆ.

ಲಷ್ಕರ್‌ ಎ ತೊಯ್ಬಾ ಎಂದಷ್ಟೇ ಈ ಸಂಘಟನೆಗೆ ಮೊದಲು ಕರೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಇದು ‘ಅಖಿಲ ಭಾರತ ಲಷ್ಕರ್‌ ಎ ತೊಯ್ಬಾ’ ಎಂದು ಹೆಸರು ಬದಲಿಸಿಕೊಂಡಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾದ ನಂತರ ಲಷ್ಕರ್‌ ಉಗ್ರರ ಮೇಲೆ ಭಾರತೀಯ ಸೇನೆ ಮುಗಿಬಿದ್ದಿದೆ. ಹೀಗಾಗಿ ಸೇಡು ತೀರಿಸಿಕೊಳ್ಳಲು ಸಂಘಟನೆಗೆ ಹೊಸ ರೂಪ ನೀಡಿ, ಹೆಸರು ಬದಲಿಸಿಕೊಳ್ಳಲು ಲಷ್ಕರ್‌ ತೀರ್ಮಾನಿಸಿತ್ತು.

ಭಾರತ-ಬಾಂಗ್ಲಾ ಪಂದ್ಯಕ್ಕೆ ಭಾರೀ ಭದ್ರತೆ:

ಲಷ್ಕರ್‌ ಬೆದರಿಕೆಯ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ನವೆಂಬರ್‌ 3ರಂದು ದಿಲ್ಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಕ್ರಿಕೆಟ್‌ ಪಂದ್ಯಕ್ಕೆ ಭದ್ರತೆ ಹೆಚ್ಚಿಸಬೇಕು ಎಂದು ದಿಲ್ಲಿ ಪೊಲೀಸರಿಗೆ ಭಾರತ ಸರ್ಕಾರ ಸೂಚಿಸಿದೆ.

ಈ ಪತ್ರ ನಕಲಿಯಾದರೂ ಆಗಿರಬಹುದು. ಆದರೆ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಭದ್ರತೆ ಬಿಗಿಗೊಳಿಸಲಾಗುತ್ತದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೂ (ಬಿಸಿಸಿಐ) ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಗೌರಿ ಹಂತಕ ಹಿಟ್ ಲಿಸ್ಟ್‌ನಲ್ಲಿ ಇನ್ನೂ ಹಲವರಿದ್ದರು

ಕಾಶ್ಮೀರದಲ್ಲಿ ಲಷ್ಕರ್‌ ಸಂಘಟನೆ ಸಕ್ರಿಯವಾಗಿದೆ. ಅಲ್ಲದೆ, 2008ರ 26/11 ಮುಂಬೈ ದಾಳಿಗೆ ಕೂಡ ಲಷ್ಕರ್‌ ಕಾರಣವಾಗಿತ್ತು.

click me!