
ನವದೆಹಲಿ(ಅ.03): ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿ ನಿತ್ಯ ಗುಂಡಿನ ಚಕಮಕಿ ನಡೆಯುತ್ತಿದೆ. ನಿತ್ಯವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ನಡೆಯಿತು. ಕಳೆದ ರಾತ್ರಿ ಕೂಡ ಬಾರಾಮುಲ್ಲಾ ಸೇನಾ ನೆಲೆ ಮತ್ತು ಬಿಎಸ್'ಎಫ್ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಕಾಳಗದಲ್ಲಿ ಭಾರತದ ಯೋಧನೊಬ್ಬ ಹುತಾತ್ಮನಾಗಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಅತ್ತ, ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದು ಇಬ್ಬರನ್ನು ಜೀವಂತ ಸೆರೆ ಹಿಡಿಯಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಿತ್ಯವೂ ಗುಂಡಿನ ಚಕಮಕು ನಡೀತಿದೆ. ಕಳ್ದ ರಾತ್ರಿ ಬಾರಾಮುಲ್ಲಾ ಜಿಲ್ಲೆಯ ಜಾಂಬಾಜ್ ಪೋರ್ ಎಂಬಲ್ಲಿ ರಾಷ್ಟ್ರೀಯ ರೈಫಲ್ಸ್‌ನ 46ನೇ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ರಾತ್ರಿ ಹತ್ತೂವರೆ ಗಂಟೆ ಸುಮಾರಿಗೆ ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದಾರೆ. ಇದೇ ಹೊತ್ತಿಗೆ ಸಮೀಪದ ಭಾರತೀಯ ಗಡಿ ಭದ್ರತಾ ಪಡೆಯ ಕಚೇರಿ ಮೇಲೂ ಅಟ್ಯಾಕ್ ಆಗಿದೆ. ಸುಮಾರು ನಾಲ್ಕೈದು ಶಸ್ತ್ರಸಜ್ಜಿತ ಭಯೋತ್ಪಾದಕರು ಎರಡು ತಂಡಗಳಲ್ಲಿ ಮುಗಿಬಿದ್ದ ಕಾರಣ ಭಾರತೀಯ ಸೇನೆ ಕೂಡ ತಕ್ಕ ತಿರುಗೇಟು ಕೊಟ್ಟಿದೆ. ಎರಡು ತಂಡಗಳಾಗಿ ಆಗಮಿಸಿದ್ದ ಉಗ್ರರಿಗೆ ನಮ್ಮ ಯೋಧರು ಗನ್ ಮೂಲಕವೇ ಉತ್ರ ಕೊಟ್ಟಿದ್ದಾರೆ. ಬಿಎಸ್ಎಫ್. ಸಿಆರ್ಪಿಎಫ್ ಮತ್ತು ಪೊಲೀಸ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನ ಹೊಡೆದುರುಳಿಸಲಾಗಿದೆ. ಮತ್ತಿಬ್ಬರನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ದುರಂತ ಅಂದ್ರೆ ಈ ಅಟ್ಯಾಕ್ನಲ್ಲಿ ಭಾರತ ಗಡಿ ಭದ್ರತಾ ಪಡೆಯ ಯೋಧನೊಬ್ಬ ಹುತಾತ್ಮನಾಗಿದ್ದು ಮತ್ತೊಬ್ಬನ ಸ್ಥಿತಿ ಕೂಡ ಗಂಭೀರವಾಗಿದೆ ಅಂತ ಹೇಳಲಾಗುತ್ತಿದೆ.
ಫೈರಿಂಗ್ನಲ್ಲಿ ಐವರು ಯೋಧರಿಗೆ ಗಾಯ: ಝೇಲಂ ನದಿ ಮೂಲಕ ಉಗ್ರರ ಪ್ರವೇಶ?
ರಾತ್ರಿಯ ಭಾರೀ ಗುಂಡಿನ ಕಾಳಗದಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಸೇರಿ ಐವರಿಗೆ ಗಾಯಗಳಾಗಿವೆ. ಮೂವರು ಯೋಧರು ಮತ್ತು ಇಬ್ಬರು ಬಿಎಸ್ಎಫ್ ಜವಾನರು ಗಾಯಗೊಂಡಿದ್ದಾರೆ. ಇನ್ನು ಗಡಿಯಲ್ಲಿ ನಡೀತಿದ್ದ ಭಾರೀ ಫೈರಿಂಗ್ ಬಗ್ಗೆ ಬಿಎಸ್ಎಫ್ ಚೀಫ್ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕ್ಷಣಕ್ಷಣದ ಮಾಹಿತಿ ನೀಡುತ್ತಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಕೇಂದ್ರ ಗೃಹ ಸಚಿವರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು.. ಇನ್ನು ಝೇಲಂ ನದಿ ಮೂಲಕ ಉಗ್ರರು ಒಳನುಸುಳಿದ್ದಾರೆ ಅನ್ನೋ ಶಂಕೆ ಬಲವಾಗಿದೆ. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬಾರಾಮುಲ್ಲಾ ಅಟ್ಯಾಕ್ ತಹಬದಿಗೆ ಬಂದಿದೆ. ಇತ್ತೀಚಿನ ಸರ್ಜಿಕಲ್ ಅಟ್ಯಾಕ್ ಬಳಿಕ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿತ್ತು. ಆದ್ರೆ, ಕಳ್ದ ರಾತ್ರಿಯ ಬಾರಾಮುಲ್ಲಾ ಸೇನಾ ನೆಲೆಯ ಮೇಲಿನ ದಾಳಿ ಪ್ರಮುಖವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.