
ಬೆಂಗಳೂರು(ಅ.03): ಅವರದು ಜಾತಿಯನ್ನ ಮೀರಿದ ಪ್ರೀತಿ. ಅಷ್ಟೂ ದಿನ ಪ್ರೀತಿಸಿದವರು ಈಗ ಸಪ್ತಪದಿ ತುಳಿದಿದ್ದಾರೆ. ಆದರೆ ಪ್ರಣಯಪಕ್ಷಿಗಳಿಗೆ ತೊಡಕಾಗಿರುವುದು ಅವರ ಮನೆಯವರೆ. ಹೌದು ದೊಡ್ಡವರ ಬೆದರಿಕೆಗೆ ಹೆದರಿದ ಆ ಪ್ರೇಮಿಗಳಿಗೆ ಈಗ ಜೀವ ಭಯ.
ಎಲ್ಲಾ ಪ್ರೇಮಿಗಳಂತೆ ಈ ಪ್ರೇಮಿಗಳು ಕೇಳುತ್ತಿರುವ ಪ್ರಶ್ನೆ 'ಪ್ರೀತ್ಸೋದ್ ತಪ್ಪಾ?' ಎಂದು. ಪೋಷಕರನ್ನು ಎದುರು ಹಾಕಿಕೊಂಡು ಮದ್ವೆಯಾದವರಿಗೆ ಈಗ ಅದೇ ಹೆತ್ತವರಿಂದ ಸಾವಿನ ಭಯ ಕಾಡುತ್ತಿದೆ. ಅಂದ ಹಾಗೆ ಅವರಿಬ್ಬರ ಪ್ರೀತಿಗೆ ತೊಡಕಾಗಿರುವುದು ಜಾತಿ. ಕಾಮಾಕ್ಷಿಪಾಳ್ಯ ನಿವಾಸಿ ಅನಿಲ್ ಮತ್ತು ಬಸವೇಶ್ವರ ನಗರದ ಕಾಮಾಕ್ಷಿ, ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರು ಒಪ್ಪದ ಕಾರಣ ಆಗಸ್ಟ್ 24ರಂದು ಮನೆ ಬಿಟ್ಟು ಓಡಿ ಹೋದವರು ಮಾಗಡಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಅನಿಲ್ ವೃತ್ತಿಯಲ್ಲಿ ಪ್ಲಂಬರ್. ಕಾಮಾಕ್ಷಿ ಕಾಲೇಜು ಓದುತ್ತಿರುವಾಗ ಪ್ರೀತಿಯಾಗಿದ್ದು ಈ ವಿಷಯ ಮನೆಯಲ್ಲಿ ಗೊತ್ತಾಗಿದೆ. ತಂದೆ ನಾರಾಯಣ ನಿವೃತ್ತ ಪೊಲೀಸ್. ಈ ಹಿಂದೆ ಕಾಮಾಕ್ಷಿ ಅಣ್ಣಂದಿರು ಅನಿಲ್ ಮೇಲೆ ಹಲ್ಲೆ ಮಾಡಿದ್ದರಂತೆ. ಮೈನರ್ ಆಗಿದ್ದಾಗ ಎಲ್ಲವನ್ನೂ ಸಹಿಸಿಕೊಂಡಿದ್ದ ಕಾಮಾಕ್ಷಿ ಈಗ ಮೇಜರ್. ಹೀಗಾಗಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಇದರಿಂದ ಕಾಮಾಕ್ಷಿ ಪೋಷಕರ ಬೆದರಿಕೆ ಕಾರಣಕ್ಕೆ ಅಂಬೇಡ್ಕರ್ ಸೇನೆ ನವದಂಪತಿಯ ಸಹಾಯಕ್ಕೆ ಮುಂದಾಗಿದೆ.
ಒಟ್ಟಿನಲ್ಲಿ ಮನೆ ಬಿಟ್ಟು ಮದುವೆಯಾಗಿರುವ ಈ ನವಜೋಡಿಗಳಿಗೆ ಪೋಷಕರೇ ವಿಲನ್ಗಳಾಗಿದ್ದು ಇವರಿಗೆ ಸೂಕ್ತ ರಕ್ಷಣೆ ಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.