ಜಯಲಲಿತಾ ಐಸಿಯು ಫೋಟೋದ ರಹಸ್ಯ ಬಯಲು

Published : Oct 03, 2016, 01:32 AM ISTUpdated : Apr 11, 2018, 01:01 PM IST
ಜಯಲಲಿತಾ ಐಸಿಯು ಫೋಟೋದ ರಹಸ್ಯ ಬಯಲು

ಸಾರಾಂಶ

ಚೆನ್ನೈ(ಅ.03): ಅನಾರೋಗ್ಯಕ್ಕೊಳಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರದ್ದು ಎನ್ನಲಾದ ಚಿತ್ರವೊಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಅದರ ಅಸಲಿಯತ್ತು ಬಯಲಾಗಿದ್ದು, ಚಿತ್ರ ಪೆರುವಿನ ಆಸ್ಪತ್ರೆಯ ಐಸಿಯು ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಚಿತ್ರ ಎಂಬ ಅಂಶ ಭಾನುವಾರ ಬೆಳಕಿಗೆ ಬಯಲಾಗಿದೆ. ಅಲ್ಲದೆ, ಚಿತ್ರ ಎಂಟು ವರ್ಷಗಳಷ್ಟು ಹಿಂದಿನದ್ದು ಎನ್ನಲಾಗಿದೆ.

ಪೆರು ರಾಜಧಾನಿ ಲಿಮಾದಲ್ಲಿರುವ ಎಸ್‌ಸಾಲುದ್ (ಉಖಚ್ಝ್ಠ) ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ 2009ರ ಆ.20ರಂದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಚಿತ್ರ ಅದಾಗಿದ್ದು, ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿಯೂ ಮಹಿಳೆ ಫೋಟೋ ಪ್ರಕಟಿಸಲಾಗಿದೆ ಎಂದು ‘ದ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ಆರೋಗ್ಯ ಸುಧಾರಣೆ: ಈ ನಡುವೆ ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಅವರು ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಡಳಿತಾರೂಡ ಎಐಎಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ ತಿಳಿಸಿದ್ದಾರೆ. ಸರ್ಕಾರ ಯಾವ ರೀತಿ ನಡೆಯಬೇಕು ಎಂದು ಜಯಾ ಅವರು ಆಸ್ಪತ್ರೆಯಿಂದಲೇ ಸಲಹೆ ಸೂಚನೆ ನೀಡುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?
ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್: ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ