ಯೋಧ ಔರಂಗಜೇಬ್ ಕೊಂದಿದ್ದ ಉಗ್ರನನ್ನು ಮಸಣಕ್ಕೆ ಸೇರಿಸಿದ ಸೇನೆ!

Published : May 18, 2019, 06:42 PM ISTUpdated : May 18, 2019, 06:44 PM IST
ಯೋಧ ಔರಂಗಜೇಬ್ ಕೊಂದಿದ್ದ ಉಗ್ರನನ್ನು ಮಸಣಕ್ಕೆ ಸೇರಿಸಿದ ಸೇನೆ!

ಸಾರಾಂಶ

ಸಂಗಾತಿಯನ್ನು ಕೊಂದಿದ್ದ ಉಗ್ರನನ್ನು ಜಹನ್ನುಮ್‌ಗೆ ಕಳುಹಿಸಿದ ಸೇನೆ| ಯೋಧ ಔರಂಗಜೇಬ್ ಹತ್ಯೆಗೈದಿದ್ದ ಉಗ್ರ ಮಟಾಷ್| ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್ ಉಗ್ರರು ಹತ| ಮೃತರಲ್ಲಿ ಔರಂಗಜೇಬ್ ಹಂತಕ ಶೌಕತ್ ದಾರ್ ಕೂಡ ಒಬ್ಬ|  

ಶ್ರೀನಗರ(ಮೇ.18): ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಭಧ್ರತಾ ಪಡೆಗಳು ಮೂವರು ಹಿಜ್ಬುಲ್ ಉಗ್ರರನ್ನು ಹೊಡೆದುರುಳಿಸಿದೆ.

ಇದರಲ್ಲಿ ಭಾರತೀಯ ಸೇನೆಯ ಯೋಧ ಔರಂಗಜೇಬ್ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಹಿಜ್ಬುಲ್ ಉಗ್ರನನ್ನೂ ಕೂಡ ಸದೆಬಡಿಯಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

ಎನ್‌ಕೌಂಟರ್‌ನಲ್ಲಿ ಹತರಾದವರನ್ನು ಶೌಕತ್ ದಾರ್, ಇರ್ಫಾನ್ ವಾರ್ ಮತ್ತು ಮುಜಾಫರ್ ಶೇಖ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಶೌಕತ್ ದಾರ್ ಎಂಬ ಉಗ್ರ ಔರಂಗಜೇಬ್ ಹತ್ಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?