ಚೀನಾ-ಪಾಕ್‌ ಮಧ್ಯೆ ನಿರ್ಮಾಣವಾಯ್ತು 880 ಕಿ.ಮೀ ಹೆದ್ದಾರಿ?

By Web DeskFirst Published May 18, 2019, 5:42 PM IST
Highlights

ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ 880 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯು ಕೇವಲ 36 ತಿಂಗಳಲ್ಲಿ ನಿರ್ಮಾಣವಾಗಿದೆ. ಸದ್ಯ ಅದೀಗ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇ್ಲಲಿದೆ ಸುದ್ದಿಯಾಚೆಗಿನ ಸತ್ಯ

ಬೀಜಿಂಗ್[ಮೇ.18]: ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ 880 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯು ಕೇವಲ 36 ತಿಂಗಳಲ್ಲಿ ನಿರ್ಮಾಣವಾಗಿದೆ. ಸದ್ಯ ಅದೀಗ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಂದರವಾದ ನದಿ, ದುರ್ಗಮ ಪ್ರದೇಶದ ನಡುವಲ್ಲಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿಯ ಮನಮೋಹಕ ದೃಶ್ಯ ವಿಡಿಯೋದಲ್ಲಿದ್ದು, ಅದರೊಂದಿಗೆ ‘880 ಕಿ.ಮೀ ಉದ್ದದ ಚೀನಾ-ಪಾಕ್‌ ಹೆದ್ದಾರಿಯು ಕೇವಲ 36 ತಿಂಗಳಲ್ಲಿ ನಿರ್ಮಾಣಗೊಂಡಿದೆ. ಅದು ಹೇಗೆದೆ ಗೊತ್ತೇ?’ ಎಂದು ಒಕ್ಕಣೆ ಬರೆಲಾಗಿದೆ. ಸದ್ಯ ಇಗೀಗ ಫೇಸ್‌ಬುಕ್‌, ಟ್ವೀಟರ್‌ಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. 4 ತಿಂಗಳ ಹಿಂದೆಯೂ ಇದೇ ವಿಡಿಯೋ ಜಾಲತಾಣಗಳಲ್ಲಿ ಇಂಥದ್ದೇ ಒಕ್ಕಣೆಯೊಂದಿಗೆ ಹರಿದಾಡಿತ್ತು. ಅದು ಅದು 20 ಲಕ್ಷ ಬಾರಿ ಶೇರ್‌ ಆಗಿತ್ತು.

ಆದರೆ ನಿಜಕ್ಕೂ ಪಾಕ್‌ ಮತ್ತು ಚೀನಾ ನಡುವೆ ಇಂಥದ್ದೊಂದು ಹೆದ್ದಾರಿ ನಿರ್ಮಾಣವಾಗಿದೆಯೇ ಎಂದು ‘ಕ್ವಿಂಟ್‌’ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಚೀನಾ-ಪಾಕ್‌ ಸಂಪರ್ಕಿಸುವ ಯಾವ ಹೆದ್ದಾರಿಯೂ ಇದುವರೆಗೆ ನಿರ್ಮಾಣವಾಗಿಲ್ಲ. ವಿಡಿಯೋದಲ್ಲಿರುವ ಹೆದ್ದಾರಿಯೂ 2012ರಲ್ಲಿ ನೈಋುತ್ಯ ಚೀನಾದ ಸಿಚ್ಯುಯಾನ್‌ ಪ್ರಾಂತ್ಯದಲ್ಲಿ ನಿರ್ಮಾಣವಾದ ಹೆದ್ದಾರಿ. ಅಂದಹಾಗೆ ಇದು 880 ಕಿ.ಮೀ ಉದ್ದವಿಲ್ಲ, 240 ಕಿ.ಮೀ ಉದ್ದವಿದೆ.

ವಿಡಿಯೋ ವೇರಿಫಿಕೇಶ್‌ನ್‌ ಟೂಲ್‌ ಮತ್ತು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಈ ವಾಸ್ತವಾಂಶ ತಿಳಿದಿದೆ. ಯಾಕ್ಸಿ ಹೈವೇ ಚೀನಾ ಎಂದು ಯುಟ್ಯೂಬ್‌ನಲ್ಲಿ ಈ ಹೆದ್ದಾರಿಯ ಅನೇಕ ವಿಡಿಯೋಗಳು ಲಭ್ಯವಿವೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!