22 ದಿನದ ಮಗು ನೋಡದ ಹುತಾತ್ಮ: ಪ್ರತಿಯೊಬ್ಬರದ್ದೂ ನೋವಿನ ಕತೆ

By Web DeskFirst Published Feb 15, 2019, 5:13 PM IST
Highlights

ಪುಲ್ವಾಮ ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಪ್ರತಿಯೊಬ್ಬ ಯೋಧರ ಕತೆ ಮನಕಲುಕುವಂತಿದೆ. 44 ವೀರ ಜವಾನರ ಕಣ್ಣೀರ ಕತೆ, ಕುಟುಂಬದ ನೋವನ್ನ ಪದಗಳಲ್ಲಿ ಕಟ್ಟಿಕೊಡಲು ಅಸಾಧ್ಯ. ಹುತಾತ್ಮ ಯೋಧರ ಕೊನೆಯ ಫೋನ್ ಸಂಭಾಷಣೆ, ಕುಟುಂಬ ಪರಿಸ್ಥಿತಿ ಕುರಿತು ವಿವರ ಇಲ್ಲಿದೆ. 

ಪುಲ್ವಾಮ(ಫೆ.15):  ಪುಲ್ವಾಮ ಉಗ್ರರ ದಾಳಿ ಇಡೀ ಭಾರತವೇ ಬೆಚ್ಚಿ ಬಿದ್ದಿರುವಾಗ ಹುತಾತ್ಮ ಯೋಧರ ಕುಟುಂಬದ ಪರಿಸ್ಥಿತಿ ಹೇಗಿರಬೇಡ.  ಪತಿ ದೇಶ ಸೇವೆಯಲ್ಲಿದ್ದಾನೆ ಹೆಮ್ಮೆ, ಮಗ ಗಡಿ ಕಾಯುವ ಯೋಧ ಅನ್ನೋ ಕುಟುಂಬದ ಸಂತಸ ಒಂದೇ ಕ್ಷಣಕ್ಕೆ ಮಾಯವಾಗಿ ಬಿಟ್ಟಿತು. ತನ್ನ ಮಗ, ತನ್ನ ಪತಿ ಬಾರದ ಲೋಕಕ್ಕೆ ತೆರಳಿದ್ದಾರೆ ಅನ್ನೋ ಸತ್ಯ ಹುತಾತ್ಮ ಯೋಧರ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಮಡದಿಗೆ ಕೊಟ್ಟ ಆ ಮಾತು ಈಡೇರಿಸುವ ಮುನ್ನವೇ ನಡೆಯಿತು ಘೋರ ದುರಂತ!

44 ವೀರ ಜವಾನರ ಮರಣ ಯೋಧರ ಕುಟುಂಬ ಕಣ್ಣುಗಳನ್ನೇ ಕಿತ್ತುಕೊಂಡಿದೆ. ಪ್ರತಿಯೊಬ್ಬ ಹುತಾತ್ಮ ಯೋಧರ ಕುಟುಂಬದ ಕಣ್ಣೀರು ಮನಕಲುಕುವಂತಿದೆ. ಪುಲ್ವಾಮದಲ್ಲಿ ಮಡಿದ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ತಿಲಕ್ ರಾಜ್ ತನ್ನ 22 ದಿನಗಳ ಕಂದನ ಬಿಟ್ಟು ಹೋಗಿದ್ದಾರೆ. 

ತಿಲಕ್ ರಾಜ್ ಪತ್ನಿ 2ನೇ ಮಗುವಿಗೆ ಜನ್ಮ ನೀಡುತ್ತಿದ್ದಂತೆ ರಜೆ ಮೇಲೆ ತವರಿಗೆ ಬಂದ ಯೋಧ, ಫೆಬ್ರವರಿ 11 ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದ. ಪ್ರತಿ ದಿನವೂ ಕುಟುಂಬದ ಜೊತೆ ಫೋನ್ ಮೂಲಕ ಮಾತನಾಡುತ್ತಿದ್ದ ತಿಲಕ್ ರಾಜ್ ಇನ್ನು ಮರಳಿ ಬರಲ್ಲ ಅನ್ನೋ ಸತ್ಯ ಆ ಪುಟ್ಟ ಕಂದನಿಗೆ ತಿಳಿದಿಲ್ಲ. ಜಗತ್ತಿಗೆ ಕಾಲಿಟ್ಟು 22 ದಿನದಲ್ಲಿ ತಂದೆಯನ್ನ ಕಳೆದುಕೊಂಡ ಮಗುವಿಗೆ ತಾಯಿ ಅಳು ಅರ್ಥವಾಗಿಲ್ಲ. 

ಇದನ್ನೂ ಓದಿ: ನನ್ನ ಇನ್ನೊಬ್ಬ ಮಗನನ್ನು ದೇಶಕ್ಕೆ ಅರ್ಪಿಸಲು ಸಿದ್ಧ : ಹುತಾತ್ಮ ಯೋಧನ ತಂದೆ

ತಿಲಕ್ ರಾಜ್ ಮಾತ್ರವಲ್ಲ, ಜೈಪುರದ ಗೋವಿಂದಪರು ಗ್ರಾಮದ ರೋಹಿತಾಶ್ ಲಾಂಬ ಯೋಧ ತನ್ನ 2 ತಿಂಗಳ ಹಸುಗೂಸಿನ ಮುಖ  ನೋಡೋ ಮುನ್ನವೇ ಹುತಾತ್ಮರಾದರು. ಪ್ರತಿ ಭಾರಿ ಫೋನ್ ಮೂಲಕ ಶೀಘ್ರದಲ್ಲೇ ರಜೆ ಮೇಲೆ ತವರಿಗೆ ವಾಪಾಸ್ಸಾಗಿ ಪುಟ್ಟ ಮಗುವಿನ ಜೊತೆ ಆಟವಾಡೋದಾಗಿ  ಹೇಳಿದ್ದ. ಕೊನೆಗೂ ಮಗುವಿನ ಮುಖ ನೋಡಲು ಸಾಧ್ಯವಾಗಲೇ ಇಲ್ಲ.

ಹುತಾತ್ಮ ಯೋಧ ಜಿ ಸುಬ್ರಹ್ಮಣ್ಯ ತಂದೆ ದುಃಖ ತಡೆಯಲು ಸಾಧ್ಯವಾಗುತ್ತಿಲ್ಲ. ಮಗ 5 ವರ್ಷಗಳ ಹಿಂದೆ CRPF ಸೇರಿಕೊಂಡಿದ್ದ. ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ. ಕೊನೆಯ ಬಾರಿಗೆ ಪತ್ನಿ ಜೊತೆ ಫೋನ್ ಮೂಲಕ ಮಾತನಾಡಿದ್ದ. ಆದೇ ಕೊನೆ ಬಳಿಕ ಫೋನ್ ಸ್ವಿಚ್ ಆಫ್ ಆಗಿತ್ತು.  ಈ ಸಾವು ನ್ಯಾಯವೇ. ನಮಗೆ ದಿಕ್ಕೆ ತೋಚದಂತಾಗಿದೆ ಎಂದು ಯೋಧ ಜಿ ಸುಬ್ರಹ್ಮಣ್ಯ ತಂದೆ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: ಆತ್ಮಾಹುತಿ ದಾಳಿಗೆ ಮಂಡ್ಯದ ವೀರಪುತ್ರ ಹುತಾತ್ಮ

ಹುತಾತ್ಮ ಯೋಧರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.  ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರಿಗಿನ ಯೋಧರ ನಿಷೇಧಿತ ಜೈಶ್-ಇ-ಮೊಹಮ್ಮದ್ ಭಯೋತ್ವಾಧಕ ಸಂಘಟನೆ ನಡೆಸಿದ ದಾಳಿಗೆ ಹುತಾತ್ಮರಾಗಿದ್ದಾರೆ. ಪ್ರತಿ ರಾಜ್ಯದ ಯೋಧರು ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ.  ರಾಜ್ಯವಾರು ಹುತಾತ್ಮ ಯೋಧರ ವಿವರ ಇಲ್ಲಿದೆ.

ಅಸ್ಸಾಂ                     1
ಬಿಹಾರ್                     2
ಹಿಮಾಚಲ ಪ್ರದೇಶ       1
ಜಮ್ಮು ಮತ್ತು ಕಾಶ್ಮೀರ   1
ಜಾರ್ಖಂಡ್                 1
ಕರ್ನಾಟಕ                  1
ಕೇರಳ                      1
ಮಧ್ಯಪ್ರದೇಶ              1
ಮಹಾರಾಷ್ಟ್ರ               2
ಒಡಿಶಾ                     2
ಪಂಜಾಬ್                  4
ರಾಜಸ್ಥಾನ                 5
ತಮಿಳುನಾಡು            1
ಉತ್ತರ ಪ್ರದೇಶ          12
ಉತ್ತರಖಂಡ              2
ಪಶ್ಚಿಮ ಬಂಗಾಳ         1

ಯೋಧರ ವೀರ ಮರಣಕ್ಕೆ ಪ್ರತೀಕಾರ ತೀರಿಸಲು ಭಾರತ ಸಜ್ಜಾಗಿದೆ. ಈ ಭಾರಿ ಭಾರತ ನೀಡೋ ಪ್ರತ್ಯುತ್ತರಕ್ಕೆ ಇನ್ನೆಂದು ಭಯೋತ್ವಾದನೆ ಗಾಳಿ ಭಾರತದಲ್ಲಿ ಬೀಸಬಾರದು. ಯೋಧರ ನೆತ್ತರು ಈ ಭೂಮಿಗೆ ಬೀಳಬಾರದು. ಯೋಧರ ಕುಟುಂಬದ ಕಣ್ಣೀರು ಮಣ್ಣು ಸೋಕಬಾರದು. ಇದಕ್ಕಾಗಿ ಇಡೀ ಭಾರತವೇ ಕಾಯುತ್ತಿದೆ.

click me!