
ಬೆಂಗಳೂರು(ಮೇ.13): ಪೊಲೀಸರಿಗೆ ಚಳ್ಳೆ ತಿನ್ನಿಸುತ್ತಿದ್ದ ನಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ನಾಗ ಅಂಡ್ ಸನ್ಸ್ ನ್ಯಾಯಾಧೀಶರ ಎದುರು ಹಾಜರಾದರು. ದೇವಸ್ಥಾನದಲ್ಲಿ ಕೈಕಟ್ಟಿ ನಿಲ್ಲೋ ಥರ ಡ್ರಾಮಾ ಆಡಿದ ನಾಗನನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊರ್ಟ್ನ ಆವರಣದಲ್ಲೂ ನಾಗನ ಹೈಡ್ರಾಮಾ ಮುಂದುವರೆದಿತ್ತು.
ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಶ್ರೀರಾಮಪುರದ ನಾಗ ನಿನ್ನೆ ತಮಿಳುನಾಡಿನ ಆರ್ಕಾಟ್ನಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಇಂದು ನಾಗ ಮತ್ತು ನಾಗನ ಇಬ್ಬರು ಮಕ್ಕಳನ್ನೂ ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು ನಂತರ 11 ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದರು.
ಕೋರ್ಟ್'ನಲ್ಲೂ ಹೈಡ್ರಾಮಾ
ನಾಗನನ್ನು ಕೋರ್ಟ್ಗೆ ಹಾಜರು ಪಡಿಸುತ್ತಲೇ ನಾಗ ನ್ಯಾಯಾಧೀಶರ ಎದುರು ವಿನಮ್ರವಾಗಿ ನಿಂತಿದ್ದ. ಅರ್ಧ ಗಂಟೆ ಕಾಲ ಕೈ ಮುಗಿದೇ ನಿಲ್ಲೋ ಮೂಲ್ಕ ಅಲ್ಲೂ ಹೈಡ್ರಾಮ ನಡೆಸಿದ. ಹೆಣ್ಣೂರು ಪೊಲೀಸರು 14 ದಿನಗಳ ಕಾಲ ನಾಗನ್ನು ವಶಕ್ಕೆ ನೀಡುವಂತೆ ಕೇಳಿಕೊಂಡರು. ಕೋರ್ಟ್ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿತು. ಇನ್ನೂ ನಾಗನ ಕೇಸ್ನಿಂದ ವಕೀಲ ಶ್ರೀರಾಮರೆಡ್ಡಿ ಹಿಂದೆ ಸರಿದ ಕಾರಣ ವಕೀಲ ನರೇಶ್ ನಾಗನ ಪರ ವಾದ ಮಂಡಿಸಿದ್ರು. ಪೊಲೀಸರು ನಾಗನ ಮೇಲೆ ದೈಹಿಕ ಹಲ್ಲೆಗೆ ಮುಂದಾಗದಂತೆ ಮನವಿ ಮಾಡಿದ್ರು.
ಕೋರ್ಟ್ ಆವರಣದ ಹೊರಗೂ ನಾಗನ ಹೈಡ್ರಾಮ ನಡೀತು. ಹಣೆಗೆ ಕೈಯಿಟ್ಟುಕೊಂಡು ನನ್ನ ಹಣೆಬರಹ ಅಂತಾ ಇಪ್ಪತ್ತಕ್ಕು ಹೆಚ್ಚು ಬಾರಿ ಗೊಣಗುತ್ತಾ ಪೊಲೀಸ್ ಜೀಪ್ ಹತ್ತಿದ. ನಾಗ ಮತ್ತು ಇಬ್ಬರು ಮಕ್ಕಳ ಜೊತೆಗೆ ಕಿಡ್ನ್ಯಾಪ್ ಪ್ರಕರಣದಲ್ಲಿ ಭಾಗಿಯಾದ, ಶರವಣ ಮತ್ತು ಜೈ ಕೃಷ್ಣರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೂ ನಾಗನ ಬಂಧಿಸುವಲ್ಲಿ ಯಶಸ್ವಿಯಾದ ಎಸಿಪಿ ರವಿಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಪೊಲೀಸ್ ಆಯುಕ್ತರು ಎರಡು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.