
ಬೆಂಗಳೂರು(ಅ.12): ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ನಿಜ. ಆದರೆ ಆಧಾರ್ ನ್ನು ಕೇವಲ ಸರ್ಕಾರಿ ಯೋಜನೆಗಳಿಗಷ್ಟೇ ಸಿಮೀತಗೊಳಿಸಿರುವ ಸುಪ್ರೀಂ, ಮೊಬೈಲ್ ಕಂಪನಿಗಳೂ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಪಡೆಯುವುದಕ್ಕೆ ತಡೆಯೊಡ್ಡಿದೆ.
ಆದರೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮೊಬೈಲ್ ಕಂಪನಿಗಳು ಗ್ರಾಹಕರಿಂದ ಆಧಾರ್ ಮಾಹಿತಿ ಪಡೆಯುವುದನ್ನು ನಿಲ್ಲಿಸಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಬೆಂಗಳೂರಿನ ಹೊಸ ರೋಡ್‌ನಲ್ಲಿರುವ ಏರ್‌ಟೆಲ್ ಶೋರೂಂನಲ್ಲಿ, ಸಿಮ್ ಕಳೆದುಕೊಂಡ ಗ್ರಾಹಕನೋರ್ವನಿಗೆ ಆಧಾರ್ ಇಲ್ಲದೇ ಹೊಸ ಸಿಮ್ ಕೊಡಲು ನಿರಾಕರಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಮುಜಾಹಿದುಲ್ ಇಸ್ಲಾಂ ಎಂಬುವವರು ತಮ್ಮ ಏರ್‌ಟೆಲ್ ಸಿಮ್ ಕಳೆದುಕೊಂಡಿದ್ದರು. ಹೀಗಾಗಿ ಏರ್‌ಟೆಲ್ ಶೋಂರೂಂಗೆ ತೆರಳಿ ಹೊಸ ಸಿಮ್ ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಆಧಾರ್ ಇಲ್ಲದೇ ಹೊಸ ಸಿಮ್ ಕೊಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಈ ಎಲ್ಲಾ ವಿದ್ಯಮಾನವನ್ನು ಇಸ್ಲಾಂ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಆಧಾರ್ ಇಲ್ಲದೇ ಹೊಸ ಸಿಮ್ ಕೊಡಲು ಆಗುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆದರೆ ಈ ಕುರಿತು ಮೊಬೈಲ್ ಕಂಪನಿಗಳು ಕೊಡುತ್ತಿರುವ ಸಮರ್ಥನೆಯೇ ಬೇರೆ. ಮೊಬೈಲ್ ಕಂಪನಿಗಳ ಪ್ರಕಾರ, ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಟೆಲಿಕಾಂ ಸಂಸ್ಥೆಗಳಿಗೆ ಇನ್ನೂ ಅಧಿಕೃತ ಆದೇಶ ಬಾರದ ಕಾರಣ, ಹಳೆಯ ಪದ್ದತಿಯನ್ನೇ ಮುಂದುವರೆಸುವುದು ಅನಿವಾರ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.