ಮೈತ್ರಿಯಲ್ಲಿ ಅಸಮಾಧಾನ: ಉಪಚುನಾವಣೆ ಬಳಿಕ ಆಪರೇಶನ್ ಕಮಲ ಶುರು?

By Web DeskFirst Published Oct 12, 2018, 4:11 PM IST
Highlights

ಮತ್ತೆ ಆಪರೇಶನ್ ಕಮಲ ಆರಂಭವಾಗಲಿದೆ. ಆಪರೇಶನ್ ಕಮಲದ ಕೆಲ ಮುನ್ಸೂಚನೆಗಳು ಇಲ್ಲಿವೆ.

ಬೆಂಗಳೂರು, (ಅ.12): ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿವೆ. ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಒಂದಲ್ಲ ಒಂದು ಗೊಂದಲಗಳು ಎದುರಾಗುತ್ತಲೇ ಇವೆ.

ವಿಧಾನಸೌಧದಲ್ಲಿ ಮೈತ್ರಿಯಾಗಿದ್ದರೆ, ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕುಸ್ತಿಗಳು ನಡೆದಿವೆ. ಕೇವಲ ಕಾರ್ಯಕರ್ತರು ಮಾತ್ರವಲ್ಲದೇ ಜೆಡಿಎಸ್ ನವರು ತಮ್ಮದೇ ಸರ್ವಾಡಳಿತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಸಹ ಮೈತ್ರಿ ಬಗ್ಗೆ ಮುನಿಸಿಕೊಂಡಿದ್ದಾರೆ.

ಮೈತ್ರಿಯಲ್ಲಿನ ಗೊಂದಲಗಳನ್ನು ಲಾಭ ಪಡೆದುಕೊಳ್ಳು ಬಿಜೆಪಿ ಸಜ್ಜಾಗಿ ನಿಂತಿದೆ. ಸದ್ಯ ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಚುನಾವಣೆ ಬಳಿಕ ಆಪರೇಶನ್ ಕಮಲ ಶುರುವಾಗಲಿದೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚವನ್ನು ಸೃಷ್ಟಿಸಿದೆ.

ಮಾಹಿತಿಯ ಪ್ರಕಾರ ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಮತ್ತೆ ಆಪರೇಶನ್ ಕಮಲ ಆರಂಭವಾಗಲಿದೆ. ಆಪರೇಶನ್ ಕಮಲ ಉಪಚುನಾವಣೆಯ ಸೋಲು ಗೆಲುವಿನ ಮೇಲೆ ನಿಂತಿದೆ ಎಂದು ಹೇಳಲಾಗುತ್ತಿದೆ.

ಆಪರೇಶನ್ ಕಮಲದ ಕೆಲ ಮುನ್ಸೂಚನೆಗಳು ಇಲ್ಲಿವೆ.

* ಎರಡು ತಿಂಗಳಲ್ಲಿ ಸರ್ಕಾರ ರಚನೆ ಮಾಡ್ತೇವೆ ಎಂದಿರುವ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿಕೆ ಈಗ ರಾಜಕಾರಣದಲ್ಲಿ ಬಾರೀ ಸಂಚಲನವನ್ನು ಹುಟ್ಟು ಹಾಕಿದೆ.

* ಬಳ್ಳಾರಿ ಚುನಾವಣೆ ಉಸ್ತುವಾರಿ ಹೊತ್ತಿರುವ ಡಿಕೆ ಶಿವಕುಮಾರ್'ಗೆ ಸೆಡ್ಡು ಹೊಡೆದಿರುವ ಆನಂದ್ ಸಿಂಗ್.

* ರಾಮನಗರದಲ್ಲಿ ಭುಗಿಲೆದ್ದಿರುವ ಅಸಮಧಾನದ ಸ್ಪೋಟ.

* ಮೈತ್ರಿ ಸರ್ಕಾರದ ಬಂಡಾಯವೇ ಬಿಜೆಪಿಗೆ ಪ್ಲಸ್ ಪಾಯಿಂಟ್.

* ಸಚಿವ ಸಂಪುಟ ವಿಸ್ತರಣೆ ಆಗದ್ದಕ್ಕೆ ಬಿಸಿ ಪಾಟೀಲ್ ಸ್ವಪಕ್ಷದ ಮೇಲೆ ಬಿಸಿಯಾಗಿದ್ದು, ಆಪರೇಶನ್ ಕಮಲದ ಖೆಡ್ಡಾದಲ್ಲಿ ಪಾಟೀಲ್ ಹೆಸರು ಸಹ ಇದೆ.

* ಎನ್ ಮಹೇಶ್ ರಾಜೀನಾಮೆ.

* ಎರಡು ತಿಂಗಳಲ್ಲಿಯೇ ಮೈತ್ರಿ ಬಿರುಕುಗೊಳ್ಳಲಿದೆ ಎನ್ನುವ ಕೋಡಿ ಶ್ರೀಗಳ ಭವಿಷ್ಯ ವಾಣಿ.

click me!