ಎಸ್ಪಿಯಾಗಿ ಬಂದ ಮಗಳಿಗೆ, ಡಿಸಿಪಿ ತಂದೆಯ ಖಡಕ್ ಸೆಲ್ಯೂಟ್ ಹೀಗಿತ್ತು!

Suvarna News   | Asianet News
Published : Jan 26, 2020, 06:53 PM IST
ಎಸ್ಪಿಯಾಗಿ ಬಂದ ಮಗಳಿಗೆ, ಡಿಸಿಪಿ ತಂದೆಯ ಖಡಕ್  ಸೆಲ್ಯೂಟ್ ಹೀಗಿತ್ತು!

ಸಾರಾಂಶ

ಯುನಿಫಾರ್ಮ್ ನಲ್ಲಿ ಮಗಳಿಗೆ ಸೆಲ್ಯೂಟ್ ಹೊಡೆದ ತಂದೆ! ಪ್ರಗತಿ ನಿವೇದನಾ ಸಮಾವೇಶದಲ್ಲಿ ತಂದೆ-ಮಗಳ ಅಪೂರ್ವ ಸಂಗಮ! ಒಂದೇ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾದ ಡಿಸಿಪಿ ತಂದೆ, ಎಸ್‌ಪಿ ಮಗಳು! ಡಿಸಿಪಿ ಉಮಾಮಹೇಶ್ವರ್ ಶರ್ಮಾ, ಎಸ್ ಪಿ ಸಿಂಧೂ ಶರ್ಮಾ! ತಂದೆ-ಮಗಳ ಸೆಲ್ಯೂಟ್ ಜುಗಲ್ ಬಂದಿಗೆ ಫಿದಾ ಆದ ಜನರು    

ಹೈದರಾಬಾದ್(ಸೆ.3): ಮಕ್ಕಳು ಸಮಾಜದಲ್ಲಿ ತನಗಿಂತ ಉನ್ನತ ಸ್ಥಾನ, ಹೆಚ್ಚಿನ ಗೌರವ ಗಳಿಸಿದಾಗಲೇ ತಂದೆಗೆ ಸಮಾಧಾನ. ಎದೆಯುದ್ದ ಬೆಳೆದ ಮಗ ಅಥವಾ ಮಗಳು ತನ್ನನ್ನು ಮೀರಿಸಿದಾಗ ತಂದೆಯ ಎದೆ ಹೆಮ್ಮೆಯಿಂದ ಉಬ್ಬುತ್ತದೆ.

ಅದರಲ್ಲೂ ತನ್ನದೇ ವೃತ್ತಿಯಲ್ಲಿ ತನ್ನ ಕರುಳಿನ ಕುಡಿ ಉನ್ನತ ಸ್ಥಾನಕ್ಕೇರಿದಾಗ ತಂದೆಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ನಿನ್ನೆ ತಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದ ಟಿಆರ್ ಎಸ್ ಪಕ್ಷದ ಸಮಾವೇಶದಲ್ಲಿ ಇಂತದ್ದೇ ಅಪರೂಪದ ಘಟನೆಯೊಂದು ನಡೆದಿದೆ.

ಟಿಆರ್‌ಎಸ್ ಆಯೋಜಿಸಿದ್ದ ಪ್ರಗತಿ ನಿವೇದನಾ ಸಮಾವೇಶದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಾದ ತಂದೆ ಮತ್ತು ಮಗಳ ಅಪೂರ್ವ ಸಂಗಮ ಇಡೀ ದೇಶದ ಗಮನ ಸೆಳೆದಿದೆ.

ಬ್ರಿಟಿಷರ ಕಾಲದ ರೈಫಲ್ಸ್‌ಗೆ ಗುಡ್ ಬೈ

ಇಲ್ಲಿನ ಮಲ್ಕಾಜಗಿರಿ ಡಿಸಿಪಿ ಉಮಾಮಹೇಶ್ವರ್ ಶರ್ಮಾ ಮತ್ತು ಜಗಿತಾಲ್ ಜಿಲ್ಲೆಯ ಎಸ್‌ಪಿ  ಸಿಂಧೂ ಶರ್ಮಾ ನಿನ್ನೆಯ ಪ್ರಗತಿ ನಿವೇದನಾ ಸಭೆಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳು. ಎಸ್‌ಪಿ ಸಿಂಧೂ ಶರ್ಮಾ ಡಿಸಿಪಿ ಉಮಾಮೇಶ್ವರ್ ಶರ್ಮಾ ಅವರ ಸ್ವಂತ ಮಗಳು ಕೂಡ ಹೌದು.

ಪೊಲೀಸ್ ಸಮವಸ್ತ್ರದಲ್ಲಿದ್ದ ಉಮಾಮೇಶ್ವರ್, ತಮಗಿಂತ ಹಿರಿಯ ಅಧಿಕಾರಿ ಸಿಂಧೂ ಶರ್ಮಾ ಅವರನ್ನು ಕಂಡೊಡನೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ. ಎಸ್‌ಪಿ ಸಿಂಧೂ ಕೂಡ ಅಷ್ಟೇ ಖಡಕ್ ಆಗಿ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ.

ಕಾಂಡೋಮ್ ಬಳಸು ಎಂದ ವೇಶ್ಯೆ ಕೊಂದವ ಈಗ ಅಂದರ್

ಇದಾದ ಕಲೆವೇ ಕ್ಷಣದಲ್ಲಿ ಇಬ್ಬರೂ ಪರಸ್ಪರರನ್ನು ಕಂಡು ನಗೆ ಬೀರಿದ್ದಾರೆ. ತಂದೆ ಮಗಳ ಈ ಜುಗಲ್‌ಬಂದಿ ಕಂಡು ನೆರೆದವರೆಲ್ಲಾ ಚಪ್ಪಾಳೆ ತಟ್ಟಿ ಆನಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!