ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಮೋದಿ ಸರ್ಕಾರದ ಗುಡ್ ನ್ಯೂಸ್

By Web DeskFirst Published Dec 11, 2018, 3:37 PM IST
Highlights

ಕೇಂದ್ರ ಸರ್ಕಾರಿ ನೌಕರರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೀಗ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಸರ್ಕಾರದ ಪಾಲನ್ನು ಶೇ.4ರಷ್ಟು ಏರಿಕೆ ಮಾಡಿದೆ. 

ನವದೆಹಲಿ : ನರೇಂದ್ರ ಮೋದಿ ಸರ್ಕಾರ ಪಂಚರಾಜ್ಯ ಫಲಿತಾಂಶದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್  ನೀಡಿದೆ. 

7ನೇ ವೇತನ ಆಯೋಗದ ಅನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಈ ಹಿಂದೆ ಇದ್ದ ಶೇ. 10ರಷ್ಟು ಕೇಂದ್ರ ಭರಿಸುವಿಕೆ ಪಾಲನ್ನು ಶೇ.14ರಷ್ಟಕ್ಕೆ ಏರಿಕೆ ಮಾಡಿದೆ. ಶೇ.4ರಷ್ಟು ಸರ್ಕಾರದ ಪಾಲನ್ನು ಏರಿಸಿದೆ. 

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಗ್ಗೆ ಪಿಂಚಣಿ ಯೋಜನೆ ಏರಿಕೆಯ ಬಗ್ಗೆ ಘೋಷಿಸಿದ್ದು,  ಎನ್ ಪಿ ಎಸ್ ಯ ಶೇ.60ರಷ್ಟು ವಿತ್ ಡ್ರಾಗೆ ಟ್ಯಾಕ್ಸ್ ವಿನಾಯಿತಿ ಅನುಕೂಲವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.  

ಪಿಂಚಣಿ ಯೋಜನೆಯು ಸರ್ಕಾರಿ ಪ್ರಾಯೋಜಿತವಾಗಿದ್ದು  2004ರ ಜನವರಿಯಲ್ಲಿ ಸರ್ಕಾರಿ ಉದ್ಯೋಗಿಗಳಿಗಾಗಿ ಚಾಲನೆ ನೀಡಲಾಯಿತು. 

ಇದೀಗ 7ನೇ ವೇತನ ಆಯೋಗದ ಪ್ರಸ್ತಾವನೆಯಂತೆ 2004ರಲ್ಲಿ ಜಾರಿಗೆ ಬಂದ ಪಿಂಚಣಿ ಯೋಜನೆಯಲ್ಲಿ ಹೆಚ್ಚುವರಿ ಪ್ರಮಾಣವನ್ನು ಭರಿಸಲು ನಿರ್ಧಾರ ಕೈಗೊಂಡಿದೆ.

click me!