
ನವದೆಹಲಿ[ಅ.20]: ಭಾರತದಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ವಿಳಂಬವಾಗುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ರೈಲು ಪ್ರಯಾಣ ವಿಳಂಬವಾದ ಕಾರಣಕ್ಕೆ ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡಲಾಗುತ್ತಿದೆ.
ದೆಹಲಿ ಹಾಗೂ ಲಖನೌ ಮಧ್ಯೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲು ಶನಿವಾರ ಎರಡೂ ಕಡೆಯ ಪ್ರಯಾಣ 2 ಗಂಟೆ ವಿಳಂಬವಾಗಿತ್ತು. ಹೀಗಾಗಿ ಪ್ರಯಾಣಿಕರಿಗೆ ತಲಾ 250 ರು. ಪರಿಹಾರವನ್ನು ಐಆರ್‌ಸಿಟಿಸಿ ನೀಡಲಿದೆ.
ತೇಜಸ್ ಬೆನ್ನಲ್ಲೇ 150 ರೈಲು, 50 ನಿಲ್ದಾಣ ಖಾಸಗೀಕರಣ
ಲಖನೌದಿಂದ ಹೊರಟ ರೈಲಿನಲ್ಲಿ 451 ಹಾಗೂ ದೆಹಲಿಯಿಂದ ಹೊರಟ ರೈಲಿನಲ್ಲಿ 500 ಮಂದಿ ಪ್ರಯಾಣಿಸಿದ್ದರು. ಪ್ರತಿಯೊಬ್ಬ ಪ್ರಯಾಣಿಕರ ಮೊಬೈಲ್‌ಗೆ ಲಿಂಕ್‌ವೊಂದನ್ನು ಕಳುಹಿಸಿದ್ದು, ಅದರ ಮೇಲೆ ಕ್ಲಿಕ್ ಮೇಲೆ ಪ್ರಯಾಣಿಕರು ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಐಆರ್‌ಸಿಟಿಸಿ ಲಖನೌ ವ್ಯವಸ್ಥಾಪಕ ಅಶ್ವಿನಿ ಶ್ರೀವಾತ್ಸವ ತಿಳಿಸಿದ್ದಾರೆ.
ಖಾಸಗೀಕರಣಗೊಂಡ ದೇಶದ ಮೊದಲ ರೈಲು ಎನಿಸಿರುವ ತೇಜಸ್ ಎಕ್ಸ್‌ಪ್ರೆಸ್ ಅ.4ರಿಂದ ಸಂಚಾರ ಆರಂಭಿಸಿದ್ದು, ಐಆರ್‌ಸಿಟಿಸಿ ರೈಲಿನ ನಿರ್ವಹಣೆ ಮಾಡುತ್ತಿದೆ.
ಖಾಸಗಿ ತೇಜಸ್ ರೈಲು ವಿಳಂಬವಾದ್ರೆ ಗಂಟೆಗೆ 100 ಪರಿಹಾರ ಸಿಗುತ್ತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.