ಅಯೋಧ್ಯೆ ತೀರ್ಪು ಮುಸ್ಲಿಂ ಪರ ಬಂದರೆ ಮಸೀದಿ ಕಟ್ಟಲ್ಲ ಎಂದ ದಾವೇದಾರರು!

By Web Desk  |  First Published Oct 20, 2019, 9:15 AM IST

ಅಯೋಧ್ಯೆ ತೀರ್ಪು ಮುಸ್ಲಿಂ ಪರ ಬಂದರೆ ಮಸೀದಿ ಕಟ್ಟಲ್ಲ| ಸದ್ಯಕ್ಕೆ ಕಾಂಪೌಂಡ್‌ ಕಟ್ಟುತ್ತೇವೆ: ಮುಸ್ಲಿಂ ಪ್ರತಿವಾದಿಗಳು


ಅಯೋಧ್ಯೆ[ಅ.20]: ಇಲ್ಲಿನ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಸುಪ್ರೀಂ ಕೋರ್ಟ್‌ ತೀರ್ಪಿಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ತೀರ್ಪು ಯಾರ ಪರ ಬರಲಿದೆ ಎಂಬ ಬಗ್ಗೆ ಚರ್ಚೆಗಳೂ ಜೋರಾಗಿ ನಡೆದಿವೆ. ಆದರೆ, ‘ತೀರ್ಪು ಮುಸ್ಲಿಂ ಪಕ್ಷಗಳ ಬಂದರೂ ಕೂಡಲೇ ಬಾಬ್ರಿ ಮಸೀದಿ ನಿರ್ಮಾಣವನ್ನು ಕೈಗೆತ್ತಿಕೊಳ್ಳಬಾರದು. ಏಕೆಂದರೆ ಕೋಮು ಸೌಹಾರ್ದತೆ ಕಾಪಾಡುವುದು ಮುಖ್ಯ’ ಎಂದು ಖುದ್ದು ಮುಸ್ಲಿಂ ದಾವೇದಾರರು ಅಭಿಪ್ರಾಯಪಟ್ಟಿದ್ದಾರೆ.

ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!

Tap to resize

Latest Videos

‘ಅಯೋಧ್ಯೆ ತೀರ್ಪು ನಮ್ಮ ಪರವೇ ಬಂತು ಎಂದುಕೊಳ್ಳೋಣ. ಆದರೆ ಅಲ್ಲಿ ಮಸೀದಿ ನಿರ್ಮಿಸಬಾರದು. ಕೇವಲ ಕಾಂಪೌಂಡ್‌ ಗೋಡೆಯನ್ನು ನಿರ್ಮಿಸಿ ಖಾಲಿ ಜಾಗ ಬಿಟ್ಟುಬಿಡಬೇಕು’ ಎಂದು ಪ್ರಕರಣದ ಅರ್ಜಿದಾರ ಹಾಜಿ ಮೆಹಬೂಬ್‌ ಹೇಳಿದ್ದಾರೆ.

ಸಂಧಾನಕ್ಕೆ ನಾವು ಸಿದ್ಧವಿಲ್ಲ: ಸುನ್ನಿ ಮಂಡಳಿ ಪ್ರಸ್ತಾವಕ್ಕೆ ಉಳಿದ ಮುಸ್ಲಿಂ ಪಕ್ಷಗಳ ತಿರಸ್ಕಾರ!

ಮತ್ತಿತರ ದಾವೆದಾರರಾದ ಮುಫ್ತಿ ಹಸ್ಬುಲ್ಲಾ ಬಾದ್‌ಶಾ ಖಾನ್‌ ಹಾಗೂ ಮೊಹಮ್ಮದ್‌ ಉಮರ್‌ ಅವರು, ‘ಕೋಮು ಸೌಹಾರ್ದವನ್ನು ನಾವು ಮೊದಲು ಗಮನದಲ್ಲಿ ಇರಿಸಿಕೊಳ್ಳಬೇಕು. ಮಸೀದಿ ನಿರ್ಮಾಣವನ್ನು ಕೂಡಲೇ ಆರಂಭಿಸಬಾರದು. ನಿರ್ಮಾಣ ಮುಂದೂಡಬೇಕು. ಶಾಂತಿ ಕಾಪಾಡುವತ್ತ ಲಕ್ಷ್ಯ ವಹಿಸಬೇಕು’ ಎಂದಿದ್ದಾರೆ.

click me!