ಲಿಫ್ಟ್‌ ಕಿಂಡಿಯಲ್ಲಿ ಕಾಲು ಸಿಲುಕಿ 9ರ ಬಾಲಕಿ ಸಾವು!

Published : Oct 20, 2019, 08:58 AM IST
ಲಿಫ್ಟ್‌ ಕಿಂಡಿಯಲ್ಲಿ ಕಾಲು  ಸಿಲುಕಿ 9ರ ಬಾಲಕಿ ಸಾವು!

ಸಾರಾಂಶ

ಲಿಫ್ಟ್‌ ಕಿಂಡಿಯಲ್ಲಿ ಕಾಲು ಸಿಲುಕಿ 9ರ ಬಾಲಕಿ ಸಾವು!| ಹೈದರಾಬಾದ್‌ನ ದಾರುಣ ಘಟನೆ| ಹಸ್ತಿನಾಪುರಂ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಘಟನೆ 

ಹೈದರಾಬಾದ್‌[ಅ.20]: ಮೂರನೇ ಮಹಡಿಯಲ್ಲಿರುವ ಮನೆಗೆ ಹೋಗಲು ಲಿಫ್ಟ್‌ ಹತ್ತುವಾಗ ಕಾಲು ಸಿಕ್ಕಿಹಾಕಿಕೊಂಡಿದ್ದರಿಂದ 9 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಮನಕಲುಕುವ ಘಟನೆ ಹೈದರಾಬಾದ್‌ ಹೊರವಲಯದಲ್ಲಿ ನಡೆದಿದೆ.

ಹಸ್ತಿನಾಪುರಂ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಲಾಸ್ಯಾ ಯಾದವ್‌ ಎಂಬಾಕೆ ಶುಕ್ರವಾರ ಮಧ್ಯಾಹ್ನ 12.30ರ ಸಮಯದಲ್ಲಿ ಮೂರನೇ ಮಹಡಿಗೆ ತೆರಳುವಾಗ ಲಿಫ್ಟ್‌ನ ಬಾಗಿಲು ಮತ್ತು ಲಿಫ್ಟ್‌ ಚಲಿಸುವ ಡಕ್ಟ್ ಮಧ್ಯೆ ಇರುವ ಕಿರಿದಾದ ಜಾಗದಲ್ಲಿ ಕಾಲು ಸಿಕ್ಕಿಹಾಕಿಕೊಂಡಿತ್ತು. ಬಾಲಕಿ ಕಾಲನ್ನು ಹೊರಗೆಳೆಯಲು ಯತ್ನಿಸುತ್ತಿದ್ದ ವೇಳೆ ವೇಳೆ ಮೂರನೇ ಮಹಡಿಯಲ್ಲಿ ಯಾರೋ ಒಬ್ಬರು ಕೆಳಗೆ ಇಳಿಯಲು ಲಿಫ್ಟ್‌ನ ಬಟನ್‌ ಒತ್ತಿದ್ದರು. ಹೀಗಾಗಿ ಲಿಫ್ಟ್‌ ಮೇಲೆ ಚಲಿಸಿದ್ದು, ಹೊರಗಿನ ಬಾಗಿಲು ತೆರೆದುಕೊಂಡೇ ಬಾಲಕಿಯನ್ನು ಉಜ್ಜಿಕೊಂಡು ಹೋಗಿದೆ.

ತಕ್ಷಣವೇ ಬಾಲಕಿಯ ತಂದೆ ಆ್ಯಂಬುಲೆನ್ಸ್‌ ಸೇವೆ ಹಾಗೂ ಲಿಫ್ಟ್‌ ನಿರ್ವಹಣಾ ಸಿಬ್ಬಂದಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಲಿಫ್ಟ್‌ ಮಧ್ಯದಲ್ಲಿ ಸಿಲಿಕಿಕೊಂಡಿದ್ದ ಲಾಸ್ಯಾಳನ್ನು 2 ಗಂಟೆಯ ಕಾರ್ಯಾಚರಣೆಯ ಬಳಿಕ ಹೊರತೆಗೆದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿ ಉಳಿಯಲಿಲ್ಲ.

ಸುರಕ್ಷತಾ ಮಾನದಂಡಗಳನ್ನು ಬಳಸದೇ ಕಳಪೆ ಗುಣಮಟ್ಟದ ಲಿಫ್ಟ್‌ ನಿರ್ಮಿಸಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಇದೊಂದು ಆಕಸ್ಮಿಕ ಮರಣ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!