ಬೆಂಗ್ಳೂರು: ಡೌಟ್ ಕೇಳಲು ಬಂದ ವಿದ್ಯಾರ್ಥಿನಿಗೆ ಮಾಡಬಾರದು ಮಾಡಿದ ಶಿಕ್ಷಕ

By Web DeskFirst Published Jan 23, 2019, 8:18 PM IST
Highlights

  ಡೌಟ್ ಕೇಳಲು ಬಂದ ವಿದ್ಯಾರ್ಥಿನಿಗೆ ಮಾಡಬಾರದು ಮಾಡಿದ ಶಿಕ್ಷಕನಿಗೆ ಬೆಂಗಳೂರಿನ ಹುಳಿಮಾವು ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಹಾಗಾದ್ರೆ ಘಟನೆಯ ಇನ್ನಷ್ಟು ಮಾಹಿತಿ ಇಲ್ಲಿದೆ. 

ಬೆಂಗಳೂರು, [ಜ.23]: 12 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ 34 ವರ್ಷದ ಇಂಗ್ಲಿಷ್ ಅಧ್ಯಾಪಕನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಪಾಠಕ್ಕೆ ಸಂಬಂಧಿಸಿದಂತೆ ಡೌಟ್ ಕ್ಲಿಯರ್ ಮಾಡಿಕೊಳ್ಳಲು ಇಂಗ್ಲಿಷ್ ಶಿಕ್ಷಕನ ಬಳಿಗೆ ಹೋಗಿದ್ದಾಳೆ. ಆದ್ರೆ ಆ ವೇಳೆ  ಶಿಕ್ಷಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ. 

ದೂರಿನ ಮೇರೆಗೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಶಿಕ್ಷಕನನ್ನು ಬಂಧಿಸಲಾಗಿದೆ.ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ ಬಳಿಕ ನ್ಯಾಯಾಂಗ ಬಂಧನ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

click me!