ಬೆಂಗಳೂರು ಪೊಲೀಸ್ ಸೂಪರ್ ಚೇಸಿಂಗ್: ತಾಯಿ ಮಡಿಲು ಸೇರಿದ ಕಂದಮ್ಮ

Published : Jan 19, 2019, 06:35 PM IST
ಬೆಂಗಳೂರು ಪೊಲೀಸ್ ಸೂಪರ್ ಚೇಸಿಂಗ್: ತಾಯಿ ಮಡಿಲು ಸೇರಿದ ಕಂದಮ್ಮ

ಸಾರಾಂಶ

 ಈ ಸ್ಟೋರಿ ಓದುವ ಮುನ್ನ ಬೆಂಗಳೂರು ಪೊಲೀಸರಿಗೆ ಸಲಾಂ ಹೊಡೆಯಲೇ ಬೇಕು. ಯಾಕಂದ್ರೆ ಸಿಲಿಕಾನ್ ಸಿಟಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆಂಗಳೂರು ಟು ತಮಿಳುನಾಡು ಸೂಪರ್ ಡೂಪರ್  ಚೇಸಿಂಗ್ ಮಾಡಿ ಕಿಡ್ನಾಪ್ ಆಗಿದ್ದ ಮಗುವನ್ನು ತಾಯಿ ಮಡಿಲು ಸೇರಿಸಿದ್ದಾರೆ.

ಬೆಂಗಳೂರು, [ಜ.19]: ಬೆಂಗಳೂರಿನಿಂದ ತಮಿಳುನಾಡಿನವರೆಗೆ ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 250 ಕೀಲೋ ಮೀಟರ್ ಚೇಸಿಂಗ್ ಮಾಡಿ ಎಳೇ ಕಂದಮ್ಮನನ್ನು ರಕ್ಷಿಸಿದ್ದಾರೆ.

ಬೆಂಗಳೂರಿನ ಮಲ್ಲತ್ತಹಳ್ಳಿ ನಿವಾಸಿಗಳಾದ ಚಂದನ್ ಮತ್ತು ರಾಣಿ ದಂಪತಿಯ ಮಗು ಕಿಡ್ನಾಪ್​ ಆಗಿತ್ತು. ಉತ್ತರ ಭಾರತ ಮೂಲದ  ಚಂದನ್ ಮತ್ತು ರಾಣಿ ದಂಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. 

ಬಿಗ್ 3 ಆ್ಯಂಡ್ ಸಿಸಿಬಿ ಟೀಂ: ನಂದಿನಿ ವಾಪಸ್ ಕರುನಾಡಿಗೆ!

ದಂಪತಿಗೆ ಪರಿಚಿತನಾಗಿದ್ದ ಕುಮಾರ್ ಎಂಬಾತ ಹಣಕ್ಕಾಗಿ 11 ತಿಂಗಳ ಮುದ್ದಾದ ಮಗುವನ್ನ ಕಿಡ್ನಾಪ್ ಮಾಡಿದ್ದ. ಚಂದನ್ ಮನೆಗೆ ಆಗಾಗ ಬರ್ತಿದ್ದ ಕುಮಾರ್, ಕಂದಮ್ಮನನ್ನ ನೋಡಿದ್ದ. 

ಜ.16ರಂದು ಮಲಗಿದ್ದ ಮಗುವನ್ನು ಎತ್ತೊಯ್ದಿದ್ದ. ಮಗುವಿನೊಂದಿಗೆ ಕಾರಿನಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದ ಕುಮಾರ್, 2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ.

ಮಗುವಿನ ಅಪಹರಣ ಸಂಬಂಧ ದೂರು ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು, ಆರೋಪಿಯನ್ನ ಬೆನ್ನಟ್ಟಿದ್ದರು. ಬರೋಬ್ಬರಿ 250 ಕೀಲೋ ಮೀಟರ್ ಚೇಸಿಂಗ್ ಮಾಡಿ ಕೊನೆಗೂ ತಮಿಳುನಾಡಿನಲ್ಲಿ ಮಗುವನ್ನ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  

ಕುಮಾರ್ ಮತ್ತು ತಂಡವನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮಗುವನ್ನ ಸುರಕ್ಷಿತವಾಗಿ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಪೊಲೀಸರ ಈ ಕಾರ್ಯಕ್ಕೆ ಪ್ರಶಂಸೆಗಳ ಮಹಾಪುರವೇ ಹರಿದು ಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾರುಖ್​ ಖಾನ್​ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ
ಉಗ್ರ ನಸೀರ್‌ಗೆ ಜೈಲಲ್ಲೇ ನೆರವು ಪ್ರಕರಣ, ಮತ್ತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ!