
ನವದೆಹಲಿ: ಎಚ್-1ಬಿ ವೀಸಾದಡಿ ಬರುವ ಭಾರತೀಯ ನೌಕರರು ತಮ್ಮ ಉದ್ಯೋಗ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಅಮೆರಿಕದಲ್ಲಿ ಕೇಳಿಬಂದ ಬೆನ್ನಲ್ಲೇ ಆ ವೀಸಾದಡಿ ಅಮೆರಿಕಕ್ಕೆ ರವಾನಿಸುವ ನೌಕರರ ಸಂಖ್ಯೆಯನ್ನು ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್ (ಟಿಸಿಎಸ್) ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.
2015ನೇ ಸಾಲಿನಲ್ಲಿ ಎಚ್-1ಬಿ ವೀಸಾದಡಿ ಅಮೆರಿಕಕ್ಕೆ ಕಳುಹಿಸಿದ್ದ ನೌಕರರ ಸಂಖ್ಯೆಗೆ ಹೋಲಿಸಿದರೆ, ಪ್ರಸಕ್ತ ವರ್ಷದಲ್ಲಿ ಕಂಪನಿ ಮೂರನೇ ಒಂದರಷ್ಟುನೌಕರರನ್ನು ಮಾತ್ರವೇ ಅಮೆರಿಕಕ್ಕೆ ರವಾನಿಸಿದೆ. ಇಲ್ಲಿಂದ ನೌಕರರನ್ನು ಕಳುಹಿಸುವ ಬದಲು ಅಮೆರಿಕದಲ್ಲಿನ ಎಂಜಿನಿಯರಿಂಗ್ ಕಾಲೇಜು ಹಾಗೂ ಬಿ-ಸ್ಕೂಲ್‌ಗಳಿಂದಲೇ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಇದರಿಂದಾಗಿ ಎಚ್-1ಬಿ ವೀಸಾ ಬೇಡಿಕೆ ಕಡಿಮೆಯಾಗಿದೆ ಎಂದು ಟಿಸಿಎಸ್‌ನ ಅಧಿಕಾರಿ ಅಜಯ್ ಮುಖರ್ಜಿ ಅವರು ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.