
ಬೆಂಗಳೂರು: ಐಟಿ ಕಂಪನಿಗಳು, ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವ ಬೆನ್ನಲ್ಲೇ, ಇತ್ತೀಚಿಗೆ ಇಸ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಬಾಸ್‌ಗಳು ಕಡಿಮೆ ಸಂಬಳ ತೆಗೆದುಕೊಂಡು, ಉದ್ಯೋಗ ಕಡಿತ ಬಿಡಬೇಕು ಎಂದು ಸಲಹೆ ನೀಡಿದ್ದರು.
ಇದಕ್ಕೆ ಪೂರಕವೆಂಬಂತೆ ವಿಪ್ರೋ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಕಳೆದ ವರ್ಷ ತಮ್ಮ ವೇತನವನ್ನು ಶೇ.63ರಷ್ಟುಭಾರೀ ಕಡಿತಗೊಳಿಸಿದ್ದಾರೆ.
ಷೇರು ಮಾರುಕಟ್ಟೆನಿಯಂತ್ರಣಾ ಸಂಸ್ಥೆ ಸೆಬಿಗೆ ವಿಪ್ರೋ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. 2016ರ ವಿತ್ತೀಯ ವರ್ಷದಲ್ಲಿ 2.17 ಕೋಟಿ ರು. ವೇತನ ಪಡೆದಿದ್ದ ಪ್ರೇಮ್‌ಜಿ, 2017ರ ಹಣಕಾಸು ವರ್ಷದಲ್ಲಿ ಕೇವಲ 79 ಲಕ್ಷ ರು. ವೇತನ ಪಡೆದಿದ್ದಾರೆ.
ಈ ವೇತನವು ದೀರ್ಘಕಾಲೀನ ಲಾಭದಾಯಕವಾಗಿರುವ ಪ್ರಾವಿಡೆಂಟ್ ಫಂಡ್ ಮತ್ತು ಪಿಂಚಣಿ ಒಳಗೊಂಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.