ತಿಂಗಳಿಗೆ 200 ರೂ ಕೊಡಿ, ಮನೆ ಮನೆಗೆ 100 Mbps ಇಂಟರ್‌ನೆಟ್‌ ತಗೊಳ್ಳಿ ಎಂದ ಸರ್ಕಾರ!

Published : Apr 29, 2025, 03:23 PM ISTUpdated : Apr 29, 2025, 03:33 PM IST
ತಿಂಗಳಿಗೆ 200 ರೂ ಕೊಡಿ, ಮನೆ ಮನೆಗೆ 100 Mbps ಇಂಟರ್‌ನೆಟ್‌ ತಗೊಳ್ಳಿ ಎಂದ ಸರ್ಕಾರ!

ಸಾರಾಂಶ

200 ರೂಪಾಯಿಗೆ 100mbps ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಸಿಗತ್ತೆ ಎನ್ನೋದು ಸದ್ಯ ಕರ್ನಾಟಕದಲ್ಲಿ ಕನಸು ಎನ್ನಬಹುದು. ಆದರೆ ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆಯಂತೆ.   

ಚೆನ್ನೈ: ತಮಿಳುನಾಡು ಸರ್ಕಾರವು ಕೈಗೆಟುಕುವ ದರದಲ್ಲಿ ಹಳ್ಳಿಯಲ್ಲಿರುವ ಮನೆಗಳಿಗೆ ಹೈ-ಸ್ಪೀಡ್ ಇಂಟರ್‌ನೆಟ್ ಸೇವೆಯನ್ನು ಒದಗಿಸುವ ಒಂದು ಪ್ರಗತಿಪರ ಯೋಜನೆಯನ್ನು ಘೋಷಿಸಿದೆ. ತಿಂಗಳಿಗೆ ಕೇವಲ 200 ರೂಪಾಯಿಗಳ ದರದಲ್ಲಿ 100 ಎಂಬಿಪಿಎಸ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವ ಯೋಜನೆಯನ್ನು ಐಟಿ ಸಚಿವ ಪಳನಿವೇಲ್ ತ್ಯಾಗರಾಜನ್ ಬಹಿರಂಗಪಡಿಸಿದ್ದಾರೆ. ಈ ಯೋಜನೆಯು ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಸೇವೆ ನೀಡುವ ಗುರಿಯನ್ನು ಹೊಂದಿದೆ.

ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ! 
ಐಟಿ ಮಿನಿಸ್ಟರ್‌ ಪಳನಿವೇಲ್ ತ್ಯಾಗರಾಜನ್ ಅವರು “ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಶನ್‌ ಆಫ್‌ ತಮಿಳುನಾಡು ಈಗಾಗಲೇ ಹತ್ತು ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಫ್ರೀ ಆಗಿ ಲ್ಯಾಪ್‌ಟಾಪ್‌ ಕೊಡುವುದು ಎಂದು ಹೇಳಿದೆ. ಕಂದಾಯ ಸಚಿವ ತಂಗಂ ತೆನ್ನರಸು ಅವರು ಬಜೆಟ್‌ಸಮಯದಲ್ಲಿ ಈ ವಿಷಯವನ್ನು ಹೇಳಿದ್ದಾರೆ. ತಮಿಳುನಾಡು ಸರ್ಕಾರವು ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡುವುದು, ಇದಕ್ಕಾಗಿ 2025-26ರಲ್ಲಿ 2000 ಕೋಟಿ ರೂಪಾಯಿ ಬಜೆಟ್‌ ಮೀಸಲು ಇಡಲಾಗಿದೆ” ಎಂದು ಹೇಳಿದ್ದಾರೆ. 

ಭಾರತಕ್ಕೆ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌

ರಾಜನ್‌ ಅವರು ಅಸೆಂಬ್ಲಿಯಲ್ಲಿ ಮಾತನಾಡಿದ್ದು, "ಫೈಬರ್‌ ಪ್ರಾಜೆಕ್ಟ್‌ನ್ನು ವರ್ಷದೊಳಗಡೆ ಮುಗಿಸುವ ಆಲೋಚನೆ ಹೊಂದಿದ್ದೇವೆ. ತಮಿಳುನಾಡು ಫೈಬರ್‌ನೆಟ್‌ ಕಾರ್ಪೋರೇಶನ್‌ ಲಿಮಿಟೆಡ್‌ ಈಗಾಗಲೇ 57500 ಕಿಮೀ ಪ್ರದೇಶದೊಳಗಡೆ ಒಟ್ಟು 12525 ಹಳ್ಳಿಗಳಿಗೆ ಇಂಟರ್‌ನೆಟ್‌ ಸೌಲಭ್ಯ ನೀಡುವುದು. ಪ್ರತಿ ತಿಂಗಳು 200 ರೂಪಾಯಿ ಕೊಟ್ಟರೆ 100mbps ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲಾಗುವುದು" ಎಂದು ಹೇಳಿದ್ದಾರೆ.

"ವಾಟ್ಸಪ್‌ನಲ್ಲಿ ಈ ಸರ್ವೀಸ್‌ ನೀಡಲಾಗುವುದು. ಈಗಾಗಲೇ ಇರುವ 260 ಸರ್ಕಾರಿ ಸೌಲಭ್ಯದೊಳಗಡೆ ಇದನ್ನು ಸೇರಿಸಲಾಗುವುದು. ಮೊದಲು ಯುಟಿಲಿಟಿ ಬಿಲ್‌ನೀಡಲಾಗುವುದು, ಆಧಾರ್‌ಲಿಂಕ್‌ ಆಗಿರುವ ಕಲ್ಯಾಣ ಯೋಜನೆಗಳಿಗೆ ಹೊಸದಾಗಿ ಈ ಕೆವೈಸಿ ವೇದಿಕೆ ಸೃಷ್ಟಿಸಲಾಗುವುದು” ಎಂದು ರಾಜನ್‌ ಹೇಳಿದ್ದಾರೆ. 


ಈ ಯೋಜನೆಯ ಮುಖ್ಯ ಲಕ್ಷಣಗಳು
ವೇಗ- 100 ಎಂಬಿಪಿಎಸ್ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ
ಬೆಲೆ- ತಿಂಗಳಿಗೆ 200 ರೂಪಾಯಿ, ಮನೆಗಳಿಗೆ ಕೈಗೆಟುಕುವ ಆಯ್ಕೆ
ವ್ಯಾಪ್ತಿ- ತಮಿಳುನಾಡು ಫೈಬರ್‌ನೆಟ್ ಕಾರ್ಪೊರೇಷನ್ ಯೋಜನೆಯು 93% ಪೂರ್ಣಗೊಂಡಿದ್ದು, 12,525 ಗ್ರಾಮಗಳಿಗೆ 57,500 ಕಿಮೀ ಆಪ್ಟಿಕಲ್ ಫೈಬರ್ ಮೂಲಕ 1 ಜಿಬಿಪಿಎಸ್ ಬ್ಯಾಂಡ್‌ವಿಡ್ತ್ ಒದಗಿಸುತ್ತಿದೆ.

ಸ್ವದೇಶಿ ಕಂಪನಿ ಏರ್‌ಟೆಲ್‌ನಿಂದ ಉಪಗ್ರಹ ಆಧಾರಿತ ಇಂಟರ್ನೆಟ್‌?: ರಂಜನ್‌ ಮಿತ್ತಲ್‌ ಮಾಹಿತಿ

ಅನುಷ್ಠಾನ ಮತ್ತು ಪ್ರಯೋಜನಗಳು
ಸರ್ಕಾರವು ಟಿವಿ ಸೇವೆಗಳಿಗೆ ಫ್ರಾಂಚೈಸಿ ಮಾದರಿಯನ್ನು ಪರಿಚಯಿಸಿ, ವೈಯಕ್ತಿಕವಾಗಿ ಮನೆಗಳಿಗೆ ಸಂಪರ್ಕವನ್ನು ವಿಸ್ತರಿಸಲು ಯೋಜಿಸಿದೆ. 4,700 ಪಂಚಾಯತ್‌ಗಳು ಇಂಟರ್ನೆಟ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವುದು ಈ ಯೋಜನೆಯ ಬಗ್ಗೆ ಗಮನಾರ್ಹ ಆಸಕ್ತಿ ಹೊಂದಿರೋದನ್ನು ತೋರಿಸುತ್ತದೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಿಗೆ ಲಾಭದಾಯಕವಾಗಿದ್ದು, ಡಿಜಿಟಲ್ ಸೇರ್ಪಡೆ, ಅಗತ್ಯ ಸೇವೆಗಳಿಗೆ ಬೆಂಬಲ ನೀಡುವುದು.

ತಮಿಳುನಾಡಿನಲ್ಲಿ ಡಿಜಿಟಲ್ ರೂಪಾಂತರ
ಈ ಯೋಜನೆಯು ರಾಜ್ಯದ ವಿಶಾಲ ಡಿಜಿಟಲ್ ರೂಪಾಂತರ ಪ್ರಯತ್ನಗಳ ಭಾಗವಾಗಿದೆ.

ಇ-ಸೇವಾ ಕೇಂದ್ರಗಳು: ಬಸ್ ಟಿಕೆಟ್ ಸೇವೆಗಳನ್ನು ಒದಗಿಸುವುದು ಮತ್ತು ಮನೆಗೆ ಇಂಟರ್ನೆಟ್ ಇಲ್ಲದ ನಾಗರಿಕರಿಗೆ ಡಿಜಿಟಲ್ ಜೀವನಾಡಿಯಾಗಿ ಕಾರ್ಯನಿರ್ವಹಿಸುವುದು
ಆಧಾರ್ ದಾಖಲಾತಿ ಕೇಂದ್ರಗಳು: 50 ಹೊಸ ಕೇಂದ್ರಗಳ ಸ್ಥಾಪನೆ
ವಾಟ್ಸಾಪ್‌ನೊಂದಿಗೆ ಏಕೀಕರಣ: ಇ-ಸೇವಾ ಸೇವೆಗಳನ್ನು ವಾಟ್ಸಾಪ್‌ನೊಂದಿಗೆ ಏಕೀಕರಿಸಿ ಸುಲಭ ಪ್ರವೇಶ ನೀಡುವುದು. 
ತಮಿಳು ಇ-ಗ್ರಂಥಾಲಯ: ತಮಿಳು ವಿದ್ಯಾರ್ಥಿಗಳಿಗೆ ಭಾಷಾ ತಂತ್ರಜ್ಞಾನ ತರಬೇತಿಗೆ ಬೆಂಬಲವಾಗಿ ನವೀಕರಣ ಮಾಡಲಾಗಿದೆ. 

The Simpsons: ಜನವರಿ 16ಕ್ಕೆ ನಿಜಕ್ಕೂ ಇಂಟರ್ನೆಟ್‌ ಬಂದ್‌ ಆಗಲಿದ್ಯಾ? ಏನಿದು ಸಿಂಪ್ಸನ್ಸ್‌ ಪ್ರೆಡಿಕ್ಷನ್‌!

ಪರಿಣಾಮ ಮತ್ತು ನಿರೀಕ್ಷೆಗಳು
ತಮಿಳುನಾಡು ಸರ್ಕಾರದ ಈ ಯೋಜನೆಯು ಸಂಪರ್ಕ, ಆಡಳಿತ, ಶಿಕ್ಷಣ ಮತ್ತು ನವೀನತೆಯನ್ನು ಸಂಯೋಜಿಸುವುದು. ವರ್ಷಾಂತ್ಯದ ವೇಳೆಗೆ ಇಂಟರ್‌ನೆಟ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ನಾಗರಿಕರು ಸುಧಾರಿತ ಇಂಟರ್ನೆಟ್ ಸೇವೆಗಳು‌, ಸರ್ಕಾರಿ ಸೇವೆಗಳಿಗೆ ಉತ್ತಮ ಪ್ರವೇಶವನ್ನು ಪಡೆಯಬಹುದು. ಈ ಕ್ರಮವು ರಾಜ್ಯದ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲಿದ್ದು, ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್