
ಬೆಂಗಳೂರು[ಏ. 14] ಬೆಂಗಳೂರಿಗೆ ಶನಿವಾರ ಬಂದಿದ್ದ ಪ್ರಧಾನಿ ಮೋದಿ ಬಿಜೆಪಿ ಪರ ಮತಯಾಚನೆ ಮಾಡಿದರು. ಅರಮನೆ ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಸಾವಿರಾರು ಜನ ಸಾಕ್ಷಿಯಾಗಿಯೂ ಇದ್ದರು. ಆದರೆ ಸಮಾವೇಶ ಮುಗಿದ ನಂತರದ ಸುದ್ದಿಯೊಂದನ್ನು ಓದಿ ತಿಳಿದುಕೊಳ್ಳಲೇಬೇಕಿದೆ.
ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತವಾದ ಯುವಕರ ತಂಡವೊಂದು ಸದ್ದಿಲ್ಲದೆ ತನ್ನ ಕೆಲಸ ಮಾಡತೊಡಗಿದೆ. ಸಮಾವೇಶ ಮುಗಿದ ನಂತರ ಕಸಗಳನ್ನು ಆಯ್ದು ಸ್ವಚ್ಛ ಮಾಡಿದೆ. ಈ ವೇಳೆ ಸ್ಥಳಕ್ಕೆ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಬಂದಿದ್ದಾರೆ. ಯುವಕರ ಕೆಲಸ ಗಮನಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಮೋದಿ ಸಮಾವೇಶದಲ್ಲಿ ಅಂದು ವೇದಿಕೆ, ಇಂದು ಲಾಸ್ಟ್ ಬೆಂಚ್!
ಒಟ್ಟಿನಲ್ಲಿ ಸಮಾವೇಶದ ನಂತರ ಸ್ವಯಂಪ್ರೇರಿತವಾಗಿ ಕಸ ಆಯ್ದ ತಂಡಕ್ಕೆ ನಮ್ಮ ಕಡೆಯಿಂದಲೂ ಅಭಿನಂದನೆ. ಇಂಥ ಮಾದರಿ ಕೆಲಸಗಳು ಹೆಚ್ಚಾಗಲಿ, ಪ್ರತಿಯೊಬ್ಬರೂ ಈ ಬಗೆಯ ಆಲೋಚನೆ ಬೆಳೆಸಿಕೊಂಡರೆ ನಮಗೆ ನಾವೇ ಹೇಳಿಕೊಂಡಂತೆ ವಂದನೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.