ರಾಜಕೀಯ ನಿವೃತ್ತಿ ಘೋಷಿಸಿದ ಮತ್ತೊಬ್ಬ ಕೇಂದ್ರ ಸಚಿವ!

Published : Apr 14, 2019, 02:10 PM ISTUpdated : Apr 14, 2019, 02:35 PM IST
ರಾಜಕೀಯ ನಿವೃತ್ತಿ ಘೋಷಿಸಿದ ಮತ್ತೊಬ್ಬ ಕೇಂದ್ರ ಸಚಿವ!

ಸಾರಾಂಶ

ರಾಜಕೀಯಕ್ಕೆ ಗುಡ್ ಬೈ ಎಂದ ಮತ್ತೊಮಬ್ಬ ಕೇಂದ್ರ ಸಚಿವ| ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ತಂದೆ, ಟಿಕೆಟ್ ಸಿಗಲು ರಾಜಕೀಯಕ್ಕೇ ವಿದಾಯ|

ಹರ್ಯಾಣ[ಏ.14]: ಕೇಂದ್ರ ಸಚಿವ ಚೌಧರಿ ಬಿರೇಂದ್ರ ಸಿಂಗ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ರಾಜ್ಯಸಭೆಗೆ ರಾಜೀನಾಮೆ ನೀಡಲು ನಿರ್ಧರಿಸಿರುವ ಬಿರೇಂದ್ರ ಸಿಂಗ್ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರಿಗೆ ಪತ್ರ ಬರೆದಿದ್ದಾರೆ. ಬಿಜೇಂದ್ರರವರ ಈ ನಿವೃತ್ತಿ ಘೋಷಣೆಗೆ ಅವರ ಪುತ್ರ ಹಿಸಾರ್ ನಿಂದ ಸ್ಪರ್ಧಿಸುತ್ತಿರುವುದೇ ಕಾರಣ ಎನ್ನಲಾಗಿದೆ. 

ಇತ್ತ ಬಿಜೆಪಿಯೂ ಭಾನುವಾರದಂದು ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಈ ಪಟ್ಟಿಯಲ್ಲಿ ಬಿರೇಂದ್ರರವರ ಮಗ ಭೃಜೇಂದ್ರ ಸಿಂಗ್ ಹೆಸರು ಕೂಡಾ ಶಾಮೀಲಾಗಿದೆ. IAS ಅಧಿಕಾರಿ ಹಾಗೂ HAFEDನ ಎಂಡಿ ಆಗಿರುವ ಭೃಜೇಂದ್ರರಿಗೆ ಹಿಸಾರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ.

ಬಿರೇಂದ್ರ ಸಿಂಗ್ 2022ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೀಗ ಅವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. 1977, 1982,1994, 1996 ಹಾಗೂ 2005 ಹೀಗೆ ಒಟ್ಟು 5 ಬಾರಿ ಬಿಜೇಂದ್ರ ಸಿಂಗ್ ಉಚಾನಾ ಕ್ಷೇತ್ರದ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಮೂರು ಬಾರಿ ಪ್ರದೇಶಿಕ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 

1984ರಲ್ಲಿ ಹಿಸಾರಾ ಲೋಕಸಭಾ ಕ್ಷೇತ್ರದಲ್ಲಿ ಓಂ ಪ್ರಕಾಶ್ ಚೌಟಾರನ್ನು ಸೋಲಿಸಿ ಸಂಸದರಾದ ಬಿಜೇಂದ್ರ ಸಿಂಗ್, 2010ರಲ್ಲಿ ಕಾಂಗ್ರೆಸ್ ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಆದರೆ 2014ರಲ್ಲಿ ಕಾಂಗ್ರೆಸ್ ಜೊತೆಗಿನ 42ವರ್ಷಗಳ ಸಂಬಂಧ ಮುರಿದು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ ಬಿಜೇಂದ್ರರನ್ನು 2016ರಲ್ಲಿ ಮತ್ತೊಮ್ಮೆ ಕಮಲ ಪಕ್ಷ ರಾಜ್ಯಸಭೆಗೆ ಕಳುಹಿಸಿತು.

ಹರ್ಯಾಣ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಬಾಂಗರ್ ಇಲಾಖೆಯಲ್ಲಿ ಈ ಹಿಂದಿನಿಂದಲೂ ಶಮ್ಶೇರ್ ಸುರ್ಜೇವಾಲಾ ಹಾಗೂ ಬಿರೇಂದ್ರ ಸಿಂಗ್ ಅತಿದೊಡ್ಡ ನಾಯಕರಾಗಿದ್ದರು. 

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು