
ಬೆಂಗಳೂರು(ಏ.12): ರಾಜ್ಯದ ಗೋಶಾಲೆಗಳಲ್ಲಿ ಜಾನುವಾರು ಗಳಿಗೆ ಸಮರ್ಪಕ ಮೇವು ಹಾಗೂ ನೀರು ಪೂರೈಕೆ ಇಲ್ಲದೇ ಕರಾಳ ಸ್ಥಿತಿ ನಿರ್ಮಾಣವಾಗಿದೆ ಎಂದು ಸುವರ್ಣ ನ್ಯೂಸ್-ಕನ್ನಡಪ್ರಭ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಗೋಶಾಲೆಗಳ ಸಮರ್ಪಕ ನಿರ್ವಹಣೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದೆ.
ಈ ಕುರಿತು ಕಂದಾಯ ಇಲಾಖೆಯ ಪ್ರಕೃತಿ ವಿಕೋಪ ನಿರ್ವಹಣೆ ವಿಭಾಗದ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಸುತ್ತೋಲೆ ಹೊರಡಿಸಿದ್ದು, ‘ಏಪ್ರಿಲ್ 4ರಂದು ಕನ್ನಡ ಪ್ರಭ ದಿನಪತ್ರಿಕೆ ಗೋಶಾಲೆಗಳ ನಿರ್ವ ಹಣೆ ಕುರಿತಂತೆ ವರದಿ ಪ್ರಕಟಿಸಿದೆ.
ಗೋಶಾಲೆಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿದ್ದು, ನಿಯಮಾವಳಿ ಅನುಸಾರ ಗೋಶಾಲೆಗಳ ನಿರ್ವಹಣೆ ನಡೆಯುತ್ತಿಲ್ಲ ಎಂದು ವರದಿ ಮಾಡಿದೆ. ಟೀವಿ ಚಾನೆಲ್‌ಗಳಲ್ಲೂ ಕೂಡ ಗೋಶಾಲೆಗಳ ಅವ್ಯವಸ್ಥೆ ಬಗೆಗೆ ವರದಿ ಬರುತ್ತಿವೆ. ಹೀಗಾಗಿ ಈ ಕುರಿತು ಸಂಬಂಧಪಟ್ಟಜಿಲ್ಲಾಧಿಕಾರಿ ಗಳು, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಸೂಕ್ತ ಕ್ರಮ ಕೈಗೊ ಳ್ಳಬೇಕು' ಎಂದಿದ್ದಾರೆ. ಗೋಶಾಲೆಗಳಲ್ಲಿ ನಿಯಮಾನು ಸಾರ ಮೇವು ಹಾಗೂ ನೀರು ಪೂರೈಸು ವಂತೆ ಅಭಿವೃದ್ಧಿ ಆಯುಕ್ತರು ಕೂಡ ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಗೋಶಾಲೆಗಳ ನಿರ್ವ ಹಣೆಗೆ ಸೂಕ್ತ ನಿಯಮಾವಳಿಯನ್ನು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.