
ನವದೆಹಲಿ (ಏ.12): 1 ಜುಲೈ 2014 ಹಾಗೂ 31 ಆಗಸ್ಟ್ 2015 ಅವಧಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆ ತೆರೆದವರು ಏ.30ರೊಳಗೆ ‘ನೋ ಯುವರ್ ಕಸ್ಟಮರ್’ (ಕೆವೈಸಿ) ದಾಖಲೆಗಳನ್ನು ಸಲ್ಲಿಸಿ ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಜೋಡಿಸಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ಹೊಸ ನಿಯಮವು ವಿದೇಶಿ ಖಾತೆ ತೆರಿಗೆ ಪಾಲನೆ ೊಪ್ಪಂ (FATCA) ವ್ಯಾಪ್ತಿಯಲ್ಲಿ ಬರುವ ಖಾತೆಗಳಿಗೆ ಅನ್ವಯವಾಗಲಿರುವುದರಿಂದ, ಆ ಬಗ್ಗೆ ಸ್ವದೃಢೀಕರಣವನ್ನು ಕೂಡಾ ಖಾತೆದಾರರು ಸಲ್ಲಿಸಬೇಕಾಗಿದೆ ಎಂದು ಇಲಾಖೆಯು ಹೇಳಿದೆ.
ನಿಗದಿತ ದಿನಗಳೋಳಗೆ ದಾಖಲೆಗಳನ್ನು ಸಲ್ಲಿಸದ ಖಾತೆಗಳನ್ನು ಬ್ಯಾಂಕುಗಳು ಬ್ಲಾಕ್ ಮಾಡುವುದಾಗಿ ಆದಾಯ ತೆರಿಗೆ ಇಲಾಖೆಯು ಹೇಳಿದೆ. ದಾಖಲೆಗಳನ್ನು ಸಲ್ಲಿಸಿದ ಬಳಿಕ ಖಾತೆಗಳನ್ನು ಬಳಸಬಹುದಾಗಿದೆ.
ಈ ನಿಯಮವು ಬ್ಯಾಂಕ್ ಖಾತೆಗಳ ಜತೆಗೆ, ವಿಮೆ, ಶೇರು ಮಾರುಕಟ್ಟೆಯಲ್ಲಿ ತೆರೆದ ಖಾತೆಗಳಿಗೂ ಅನ್ವಯಿಸುತ್ತದೆ.
ಭಾರತ ಹಾಗೂ ಅಮೆರಿಕಾ ನಡುವೆ ಆಗಿರುವ FATCA ಒಪ್ಪಂದದನ್ವಯ 1 ಜುಲೈ 2014 ಹಾಗೂ 31 ಆಗಸ್ಟ್ 2015 ಅವಧಿಯಲ್ಲಿ ತೆರೆಯಲಾದ ಖಾತೆದಾರರಿಂದ ಸ್ವದೃಢೀಕರಣ ಪಡೆಯಲು ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.