
ಬೆಂಗಳೂರು (ನ.21): ಲೈವ್'ಬ್ಯಾಂಡ್ ಬ್ಯಾನ್ ಆಗಿ ಎಷ್ಟೋ ವರ್ಷ ಆಯ್ತು. ದಾಖಲೆಗಳಲ್ಲಿ ಹುಡುಕಿದರೂ ಸಿಗಲ್ಲ. ವಿಧಾನಸೌಧದ ಮೂಲೆಗಳಲ್ಲಿನ ದಾಖಲೆಗಳಲ್ಲಿ ಸಿಗಲ್ಲ. ಕಾನೂನು ಪುಸ್ತಕಗಳಲ್ಲಿ ಸಿಗಲ್ಲ. ಆದರೆ, ಬೆಂಗಳೂರಲ್ಲಿ ಓಪನ್ ಆಗಿಯೇ ನಡೆಯುತ್ತೆ ಗರ್ಮಾ ಗರಂ ದಂಧೆ. ಆ ದಂಧೆಯ ವಿರುದ್ಧ ಸಮರ ಸಾರಿದೆ ಸುವರ್ಣ ನ್ಯೂಸ್. ಸುವರ್ಣ ನ್ಯೂಸ್ ರಹಸ್ಯ ಕ್ಯಾಮೆರಾ ಕಣ್ಣಿಗೆ ಈ ಬಾರಿ ಬಿದ್ದಿರೋದು ಲೈವ್ಬ್ಯಾಂಡ್ಸ್.
ಲೈವ್ ಬ್ಯಾಂಡ್ ಅಂದರೆ ಇದು ಮೇಲ್ನೋಟಕ್ಕೆ ಬಾರ್ಗಳು. ಒಳ ಹೊಕ್ಕರೆ ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು, ಕುಣೀತಾ ಇರ್ತಾರೆ. ಕುಡಿಯೋಕೆ ಬಿಯರ್ ಬೇಕಾ..? ವ್ಹಿಸ್ಕಿ ಬೇಕಾ..? ಕುಡೀರಿ. ಆದರೆ, ಇವರ ಡ್ಯಾನ್ಸ್ನ್ನೂ ನೋಡಿಕೊಂಡು ಕುಡಿಯಬೇಕಂದ್ರೆ, ಒಂದಕ್ಕೆ 10 ಪಟ್ಟು ದುಡ್ಡು ಕೊಡಲೇಬೇಕು. ಅಷ್ಟೇ ಅಲ್ಲ, ಕಿಕ್ ಏರಿದ ಮೇಲೆ ಕಾಮಕುದುರೆ ಏರಬೇಕೆಂದರೆ ಅದೇ ಹುಡುಗಿಯರು ನಿಮಗೆ ದುಡ್ಡಿಗೂ ಸಿಗ್ತಾರೆ. ಒನ್ ನೈಟ್ ಸ್ಟಾಂಡ್ ಫಾರ್ ಮನಿ. ಆ ದಂಧೆಯನ್ನ ಸುಪ್ರೀಂಕೋರ್ಟ್ ಬ್ಯಾನ್ ಮಾಡಿ ವರ್ಷಗಳೇ ಆಗಿ ಹೋಗಿದೆ. ಆದರೂ ಇದು ನಡೀತಾ ಇದೆ. ಇವರು ಇದಕ್ಕೆಲ್ಲ ಕೃಪಾಕಟಾಕ್ಷದಂತೆ ಬಳಸಿಕೊಂಡಿರೋದು ಹೈಕೋರ್ಟ್ ನೀಡಿದ್ದ ತೀರ್ಪನ್ನ. ಹೈಕೋರ್ಟ್, ಲೇಡಿಸ್ ಬಾರ್'ಗೆ ಪರ್ಮಿಷನ್ ಕೊಟ್ಟಿದೆ. ಆದರೆ, ಲೇಡಿಸ್ ಬಾರ್ನಲ್ಲಿ ಹತ್ತಾರು ಕಂಡೀಷನ್ ಹಾಕಿದೆ. ಡ್ರೆಸ್ಕೋಡ್, ಕುಡುಕರ ವರ್ತನೆ, ಟೈಮಿಂಗು ಎಲ್ಲದಕ್ಕೂ ಕಂಡೀಷನ್ ಇವೆ. ಆದರೆ, ಕೆಲವು ಬಾರ್ಗಳು ಲೇಡಿಸ್ ಬಾರ್ ಹೆಸರಲ್ಲಿ ಲೈಸೆನ್ಸ್ ಪಡೆದು ನಡೆಸುತ್ತಾ ಇರೋದು ಮಾತ್ರ ಲೈವ್ ಬ್ಯಾಂಡ್. ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಬಯಲಾಗಿರೋದು ಇದೇ ದಂಧೆ. ಲೈವ್ ಬ್ಯಾಂಡ್ ದಂಧೆ.
ಅಂದಹಾಗೆ ಇಂಥಾದ್ದೊಂದು ದಂಧೆಯ ಬಗ್ಗೆ ಸುವರ್ಣ ನ್ಯೂಸ್ಗೆ ಮಾಹಿತಿ ಕೊಟ್ಟಿದ್ದು ಕೆಲವು ಕಾಲೇಜು ವಿದ್ಯಾರ್ಥಿಗಳು. ಈ ಬಗ್ಗೆ ಪೊಲೀಸರಿಗೆ ತಿಳಿಸಿಯೂ ಪ್ರಯೋಜನವಾಗದ ಅವರಿಗೆ ಆಸರೆಯಾಗಿ ಕಂಡಿದ್ದು ಸುವರ್ಣ ನ್ಯೂಸ್. ವಿದ್ಯಾರ್ಥಿಗಳ ಮಾಹಿತಿಯನ್ನ ಸೀಕ್ರೆಟ್ ಆಗಿಟ್ಟಿದೆ ಸುವರ್ಣ ನ್ಯೂಸ್. ಮುಂದಿನ ಹೊಣೆ ಹೊತ್ತು ಫೀಲ್ಡಿಗಿಳಿದಾಗ ನಮಗೂ ಬೆಚ್ಚಿ ಬೀಳುವಂತೆ ಒಂದೊಂದೇ ದಂಧೆಗಳು ಹೊರಬೀಳುತ್ತಾ ಬಂದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.