ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಮುಂದಾಗುತ್ತಾ ಸರ್ಕಾರ?

By Suvarna Web DeskFirst Published Nov 21, 2017, 8:17 AM IST
Highlights

ಕಳೆದ ಹತ್ತಾರು ದಿನಗಳಿಂದ ಒಂದೇ ಸಮನೆ ಚರ್ಚೆಗೊಳಗಾಗಿದ್ದ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ವಿವಾದ ತಣ್ಣಗಾಗುವ  ಮೊದಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿಕೋರತನಕ್ಕೂ ಬ್ರೇಕ್ ಹಾಕಿ ಅನ್ನೋ ಕೂಗು ಕೇಳಿ ಬಂದಿದೆ.

ಬೆಂಗಳೂರು (ನ.21): ಕಳೆದ ಹತ್ತಾರು ದಿನಗಳಿಂದ ಒಂದೇ ಸಮನೆ ಚರ್ಚೆಗೊಳಗಾಗಿದ್ದ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ವಿವಾದ ತಣ್ಣಗಾಗುವ  ಮೊದಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಲೂಟಿಕೋರತನಕ್ಕೂ ಬ್ರೇಕ್ ಹಾಕಿ ಅನ್ನೋ ಕೂಗು ಕೇಳಿ ಬಂದಿದೆ.

ರೋಗಿಗಳ ಸುಲಿಗೆಗಿಳಿದ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸರ್ಕಾರ ಹೊಸ ಕಾಯ್ದೆ ತರಲು ಹರಸಾಹಸ ಪಡುತ್ತಿದೆ. ಇದರ ಬೆನ್ನಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಆಟಾಟೋಪಕ್ಕೆ ಬ್ರೇಕ್ ಹಾಕುವ ಕಾಯ್ದೆಯನ್ನೂ ಜಾರಿಗೆ ತರಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಎಲ್​ಕೆಜಿಗೆ ಮಗು ಸೇರಿಸಬೇಕಂದ್ರೂ ಕೆಲ ಶಿಕ್ಷಣ ಸಂಸ್ಥೆಗಳು 80 ಸಾವಿರದಿಂದ 2 ಲಕ್ಷದವರೆಗೂ ಹಣ ಪೀಕುತ್ತಿವೆ. ಹೀಗೆ ಹಗಲು ದರೋಡೆಗಿಳಿದ ಶಿಕ್ಷಣ ಸಂಸ್ಥೆಗಳಿಗೆ ಬ್ರೇಕ್ ಹಾಕಲು ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಅನ್ನೋದು ಪೋಷಕರ ಆಗ್ರಹ.

ವಿಚಿತ್ರ ಅಂದ್ರೆ ಈ ಶಿಕ್ಷಣ ಕಾಯ್ದೆಯ ತಿದ್ದುಪಡಿಯನ್ನು ಸ್ವತಃ ಹಲವು ಖಾಸಗಿ ಶಾಲೆಗಳೇ ಬೆಂಬಲಿಸಲು ನಿರ್ಧರಿಸಿವೆ. ಕಾರ್ಪೊರೇಟ್ ಸ್ಕೂಲ್ ಗಳು ಮತ್ತು ಹೈಟೆಕ್ ಶಾಲೆಗಳು ವಸೂಲಿ ಮಾಡುತ್ತಿರೋ ಹಣದಿಂದ ಬಜೆಟ್ ಸ್ಕೂಲ್​ಗಳಿಗೆ ಕೆಟ್ಟ ಹೆಸರು ಅನ್ನೋದು ಇವರ ವಾದ.

ಒಟ್ಟಿನಲ್ಲಿ, ಸದ್ಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ನಿಯಂತ್ರಿಸೋಕೆ ಸಾಧ್ಯವಾಗದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನ, ವಿಧೇಯಕದ ಮೂಲಕ ಸರ್ಕಾರ ನಿಯಂತ್ರಿಸಲು ಮುಂದಾಗುತ್ತಾ ನೋಡಬೇಕಿದೆ.

click me!