ಇಂದು ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡನೆ; ಏನಿದೆ ವಿಧೇಯಕದಲ್ಲಿ?

By Suvarna Web DeskFirst Published Nov 21, 2017, 7:59 AM IST
Highlights

ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ ಇಂದು ಮಂಡನೆಯಾಗಲಿದೆ.  ಆರೋಗ್ಯ ಸಚಿವ ರಮೇಶ್​​ ಕುಮಾರ್​​ರಿಂದ ಐತಿಹಾಸಿಕ ವರದಿ ಮಂಡನೆಯಾಗಲಿದೆ.

ಬೆಂಗಳೂರು (ನ.21): ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ ಇಂದು ಮಂಡನೆಯಾಗಲಿದೆ.  ಆರೋಗ್ಯ ಸಚಿವ ರಮೇಶ್​​ ಕುಮಾರ್​​ರಿಂದ ಐತಿಹಾಸಿಕ ವರದಿ ಮಂಡನೆಯಾಗಲಿದೆ.

ಭಾರೀ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದ, ಪ್ರತಿಭಟನೆಗೆ ಕಾರಣವಾಗಿದ್ದ ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ವಿಧೇಯಕದಲ್ಲಿ ಏನಿದೆ? ಸುವರ್ಣನ್ಯೂಸ್​ ಬಳಿ ಇದೆ ಕರಡು ಮಸೂದೆಯ ಅಂಶಗಳು

ಮಸೂದೆಯಲ್ಲಿ ಖಾಸಗಿ ವೈದ್ಯರನ್ನು ಜೈಲಿಗೆ ಅಟ್ಟುವ ಅಂಶಗಳೇ ಇಲ್ಲ

ರೋಗಿಗೆ ಚಿಕಿತ್ಸೆ ನೀಡುವುದರಲ್ಲಿ ಎಡವಟ್ಟಾದರೆ ವೈದ್ಯರಿಗೆ ಜೈಲು ಶಿಕ್ಷೆ ಇಲ್ಲ

ವೈದ್ಯರಿಗೆ ಜೈಲು ಶಿಕ್ಷೆ ನೀಡುವ ಪ್ರಸ್ತಾಪ ಕೈಬಿಟ್ಟ ಸರ್ಕಾರ

ನ.7ಕ್ಕೆ ಸಿದ್ಧಪಡಿಸಲಾದ ಕರಡು ಮಸೂದೆಯಲ್ಲಿ ಜೈಲು ಶಿಕ್ಷೆಯ ಅಂಶಗಳೇ ಇಲ್ಲ

ತಪ್ಪು ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ವಿಚಾರಣೆ ನಡೆಸಲಿದೆ ದೂರು ನಿವಾರಣಾ ಸಮಿತಿ

ದೂರು ನಿವಾರಣಾ ಸಮಿತಿಗೆ ವೈದ್ಯರನ್ನು ಶಿಕ್ಷೆ ವಿಧಿಸುವ ಅಧಿಕಾರವಿಲ್ಲ

ಖಾಸಗಿ ಆಸ್ಪತ್ರೆಗಳಿಗೆ ಏಕನೀತಿಯ ದರ ರೂಪಿಸಬೇಕೆಂಬ ಅಂಶ ಕಾಯ್ದೆಯಲ್ಲಿಲ್ಲ

ಆಸ್ಪತ್ರೆ ಇರುವ ಸ್ಥಳ, ನೀಡುವ ಸೌಲಭ್ಯ ಆಧರಿಸಿ, ವೈದ್ಯರ ಅಭಿಪ್ರಾಯ ಪಡೆದು ಬೆಲೆ ನಿಗದಿ

ದೂರು ನಿವಾರಣಾ ಸಮಿತಿಯಲ್ಲಿ ವೈದ್ಯರಿಗೆ ಅವಕಾಶವಿಲ್ಲ ಎಂಬುದು ತಪ್ಪು ಗ್ರಹಿಕೆ

ಜಿಲ್ಲಾ ವೈದ್ಯಾಧಿಕಾರಿ, ಒಬ್ಬ ಖಾಸಗಿ ಆಸ್ಪತ್ರೆಯ ವೈದ್ಯರು ಸಮಿತಿಯ ಸದಸ್ಯ

ಖಾಸಗಿ ವೈದ್ಯರು, ರೋಗಿಗಳು ಇಬ್ಬರೂ ಕೂಡಾ ವಕೀಲರನ್ನು ಇಟ್ಟುಕೊಳ್ಳುವಂತಿಲ್ಲ

ಇಬ್ಬರೂ ನೇರವಾಗಿ ತಮ್ಮ ಅಳಲನ್ನು ಸಮಿತಿ ಮುಂದೆ ತೋಡಿಕೊಳ್ಳಬಹುದು

click me!