
ಇವು ಸರ್ಕಾರಿ ಶಾಲೆಗಳಲ್ಲ ಶೋಷಣೆಯ ಶಾಲೆಗಳು. ಇಲ್ಲಿ ಶಿಕ್ಷಣ ದೊರಕುತ್ತಿಲ್ಲ ಬದಲಿಗೆ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ. ಕಮಿಷನ್ ದಂಧೆಗೆ ಮಕ್ಕಳನ್ನೇ ಬಲಿ ಕೊಡಲಾಗುತ್ತಿದೆ. ಇಂಥಾ ಸರ್ಕಾರಿ ಶಾಲೆಗಳ ಬಂಡವಾಳವನ್ನು ಸುವರ್ಣ ನ್ಯೂಸ್ನ ಕವರ್ಸ್ಟೋರಿ ಬಯಲು ಮಾಡಿದೆ.
ಸಮಾಜಕಲ್ಯಾಣ ಇಲಾಖೆ ಗಿರಿಜನರಿಗಾಗಿ ಸ್ಥಾಪಿಸಿರುವ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣವೇ ಸಿಗುತ್ತಿಲ್ಲ. ಆಶ್ರಮ ಶಾಲೆಯಲ್ಲಿ ಓದುತ್ತಿರುವ 7ನೇ ತರಗತಿ ವಿದ್ಯಾರ್ಥಿಗಳಿಗೆ ಅಆಇಈ, ಎಬಿಸಿಡಿಯೇ ಬರುತ್ತಿಲ್ಲ. ಇದನ್ನು ನಮ್ಮ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡದ ರಿಯಾಲಿಟಿ ಚೆಕ್ನಲ್ಲೂ ಬಯಲಾಗಿದೆ.
ಈ ಆಶ್ರಮ ಶಾಲೆಗಳಲ್ಲಿ ಕಲಿಸೋ ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಅವರಲ್ಲಿ ಗುಣಮಟ್ಟವೇ ಇಲ್ಲದ ಕಾರಣ ಗಿರಿಜನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕೇರಳ ಮಾದರಿ ಅನುಸರಿಸಲಿ ಅನ್ನೋದು ಗಿರಿಜನ ಸಮುದಾಯದ ನಾಯಕರ ಆಗ್ರಹ.
ಬಡ ಮಕ್ಕಳ ಈ ಆಶ್ರಮ ಶಾಲೆ ಕಮಿಷನ್ ದಂಧೆಯ ಕೂಪವಾಗಿದೆ. ಭ್ರಷ್ಟರ ತಾಣವಾಗಿದೆ. ರಾಜ್ಯದಲ್ಲಿರೋ 116 ಆಶ್ರಮಶಾಲೆಗಳಿಗೆ ವರ್ಷಕ್ಕೆ 70 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗುತ್ತಿದ್ದರೂ ಅದು ಮಕ್ಕಳ ಪಾಲಾಗದೆ ನುಂಗುಬಾಕ ಅಧಿಕಾರಿಗಳ ಜೇಬು ಸೇರುತ್ತಿರೋದು ಮಾತ್ರ ಸಚಿವ ಆಂಜನೇಯ ಅವರಿಗೆ ಕಾಣದಿರೋದು ದುರಂತವೇ ಸರಿ.
ವರದಿ: ವಿಜಯಲಕ್ಷ್ಮಿಶಿಬರೂರು, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.