ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್: ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ 3 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ

By Suvarna Web DeskFirst Published Jun 14, 2017, 8:24 PM IST
Highlights

ಸುವರ್ಣನ್ಯೂಸ್ ವರದಿ ಬಳಿಕ ಎಚ್ಚತುಕೊಂಡ ಅಧಿಕಾರಿಗಳು ಶಿಥಿಲಗೊಂಡಿದ್ದ ಆನೇಕಲ್ ತಾಲೂಕಿನ ಹೊನ್ನಕಳಸಾಪುರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆನೆಕಲ್ (ಜೂ.14): ಸುವರ್ಣನ್ಯೂಸ್ ವರದಿ ಬಳಿಕ ಎಚ್ಚತುಕೊಂಡ ಅಧಿಕಾರಿಗಳು ಶಿಥಿಲಗೊಂಡಿದ್ದ ಆನೇಕಲ್ ತಾಲೂಕಿನ ಹೊನ್ನಕಳಸಾಪುರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹ ಮೂರ್ತಿ, ಆನೇಕಲ್ ಬಿಇಓ ರಾಮಮೂರ್ತಿ ಭೇಟಿ ನೀಡಿ ಶಾಲೆಯ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ದೊಡ್ಡದಾಗಿ ಬಿರುಕು ಬಿಟ್ಟಿರುವ ಗೋಡೆಗಳು, ಈಗಲೋ, ಆಗಲೋ ಬೀಳುವಂತಿರುವ ಮೇಲ್ಛಾವಣಿಯ ಕೆಳಗೆ ಕುಳಿತು ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು.  ಇಲ್ಲಿನ ಅವ್ಯವಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಹೊಸ ಕಟ್ಟಡದ ನಿರ್ಮಾಣಕ್ಕಾಗಲಿ, ಕಟ್ಟಡದ ರಿಪೇರಿ ಮಾಡಿಸುವ ಗೋಜಿಗೆ ಹೋಗಿರಲಿಲ್ಲ.  ಬಗ್ಗೆ ಸುವರ್ಣ ನ್ಯೂಸ್  ವರದಿ ಮಾಡಿತ್ತು.

ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ ಮೂರು ತಿಂಗಳಲ್ಲಿ ನೂತನ ಕಟ್ಟ ನಿರ್ಮಿಸಿಕೊಟುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು ಭರವಸೆ ನೀಡಿದ್ದಾರೆ.

 

click me!