
ವಾಷಿಂಗ್ಟನ್(ಜೂನ್ 14): ಅಮೆರಿಕದ ಜನಪ್ರತಿನಿಧಿಗಳು ಬೇಸ್'ಬಾಲ್ ಆಟದ ಅಭ್ಯಾಸದಲ್ಲಿ ತೊಡಗಿದ್ದಾಗ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ರಿಪಬ್ಲಿಕನ್ ಪಕ್ಷದ ಸಂಸದ ಸ್ಟೀವ್ ಸ್ಕಾಲೈಸ್ ಸೇರಿದಂತೆ ಹಲವು ಜನರು ಗಾಯಗೊಂಡಿದ್ದಾರೆ. ಅಪರಿಚಿತ ದುಷ್ಕರ್ಮಿಯು 50 ಸುತ್ತು ಗುಂಡು ಹಾರಿಸಿ ಹಲವರನ್ನು ಗಾಯಗೊಳಿಸಿದ ಎಂದು ವರದಿಗಳು ಹೇಳುತ್ತಿವೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆತ ಯಾಕೆ ಆ ಕೃತ್ಯ ಎಸಗಿದ ಎಂಬುದು ತಿಳಿಯಬೇಕಿದೆ.
ಲೂಸಿಯಾನಾದ ಚುನಾಯಿತ ಜನಪ್ರತಿನಿಧಿ ರಿಪಬ್ಲಿಕನ್ ಪಕ್ಷದ ಸ್ಟೀವ್ ಸ್ಕಾಲೈಸ್ ಸೇರಿದಂತೆ ಸುಮಾರು 25 ಜನರು ಬೇಸ್'ಬಾಲ್ ಆಟದ ಅಭ್ಯಾಸದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಜನಪ್ರತಿನಿಧಿಗಳ ನಡುವೆ ಪ್ರತೀ ವರ್ಷ ಬೇಸ್'ಬಾಲ್ ಆಟದ ಸ್ಪರ್ಧೆ ನಡೆಯುತ್ತದೆ. ಅದಕ್ಕೆ ತಯಾರಿಯಾಗಿ ಆಟದ ಮೈದಾನದಲ್ಲಿ ಅಭ್ಯಾಸ ನಡೆಯುತ್ತಿತ್ತೆನ್ನಲಾಗಿದೆ. ಗಾಯಗೊಂಡವರಲ್ಲಿ ಅಮೆರಿಕದ ಸಂಸತ್ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಒಳಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.