
ನವದೆಹಲಿ[ಜೂ.20]: ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ (67) ಮತ್ತು ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್(76) ರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದು ಎಂಬ ಊಹಾಪೋಹಗಳಿಗೆ ಮಂಗಳವಾರ ತೆರೆ ಬಿದ್ದಿದೆ.
ಸುಷ್ಮಾ ಸ್ವರಾಜ್ ಅವರು ಮಾಜಿ ಸಂಸದೆ ಎಂಬ ಗುರುತಿನ ಚೀಟಿ ಪಡೆಯಲು ಅರ್ಜಿ ಹಾಕಿದ್ದರೆ, ಸುಮಿತ್ರಾ ಮಹಾಜನ್‌ಗೆ ಈ ಕುರಿತ ಗುರುತಿನ ಚೀಟಿ ಮಂಗಳವಾರ ಸಿಕ್ಕಿದೆ. ಹೀಗಾಗಿ ಇಬ್ಬರ ಲೋಕಸಭೆ ಅಥವಾ ರಾಜ್ಯಸಭೆ ಇನಿಂಗ್ಸ್ ಮುಕ್ತಾಯವಾದಂತೆ ಆಗಿದೆ.
ಅನಾರೋಗ್ಯದ ಕಾರಣ ನೀಡಿ ಸುಷ್ಮಾ ಸ್ವರಾಜ್ ಲೋಕಸಭೆ ಸ್ಪರ್ಧಿಸುವುದರಿಂದ ಹಿಂದೆ ಸರಿದಿದ್ದರು. ಇನ್ನು ವಯಸ್ಸಿನ ಕಾರಣ ನೀಡಿ, 9 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸುಮಿತ್ರಾ ಮಹಾಜನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೂ ಇಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ, ಸಚಿವ ಸ್ಥಾನ ನೀಡುವ ಕುರಿತು ಊಹಾಪೋಹಗಳಿದ್ದವು. ಆದರೆ ಇದೀಗ ಇಬ್ಬರೂ ಮಾಜಿ ಸಂಸದರು ಪಡೆಯುವ ಕಾರ್ಡ್‌ಗೆ ಮೊರೆ ಹೋದ ಕಾರಣ, ಅಂಥ ಸಾಧ್ಯತೆ ಇಲ್ಲ.
ಆದರೆ ಶೀಘ್ರವೇ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆ ಖಾಲಿಯಾಗಲಿದ್ದು, ಆ ಹುದ್ದೆಗೆ ಇಬ್ಬರನ್ನೂ ನೇಮಕ ಮಾಡಿದರೂ ಅಚ್ಚರಿ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.