ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

By Suvarna Web deskFirst Published Oct 19, 2017, 5:13 PM IST
Highlights

ಬಾಕಿಯುಳಿದಿರುವ ಹಾಗೂ ಚಿಕಿತ್ಸೆಗೆ ನೈಜವಾಗಿ ಅರ್ಹವಾದ ವೀಸಾ ಅರ್ಜಿಗಳನ್ನು ವಿಲೇವಾರಿಗೊಳಿಸಲಿದ್ದು,ವೀಸಾ ಪಡೆದುಕೊಂಡವರು ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಅ.19): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುವ ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ. ನೆರೆಯ ರಾಷ್ಟ್ರದಿಂದ ಬಾಕಿಯುಳಿದಿರುವ ಎಲ್ಲ ವೈದ್ಯಕೀಯ ವೀಸಾಗಳ ಅರ್ಜಿಗಳನ್ನು ವಿಲೇವಾರಿ ಮಾಡುವುದಾಗಿ ತಿಳಿಸಿದ್ದಾರೆ.

ಬಾಕಿಯುಳಿದಿರುವ ಹಾಗೂ ಚಿಕಿತ್ಸೆಗೆ ನೈಜವಾಗಿ ಅರ್ಹವಾದ ವೀಸಾ ಅರ್ಜಿಗಳನ್ನು ವಿಲೇವಾರಿಗೊಳಿಸಲಿದ್ದು,  ವೀಸಾ ಪಡೆದುಕೊಂಡವರು ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ 18 ರಂದು ಐವರು ಪಾಕಿಸ್ತಾನಿ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡಲು ಅನುಮತಿ ನೀಡಿದ್ದರು. ವಿದೇಶಾಂಗ ಸಚಿವರು ಅನಾರೋಗ್ಯ ಪೀಡಿತ ಪಾಕ್ ನಾಗರಿಕರಿಗೆ ವೀಸಾಗೆ ಅನುಮತಿ ನೀಡುತ್ತಿರುವುದು ಇದು ಮೊದಲೇನಲ್ಲ  ಹಿಂದೆ ಹಲವು ಬಾರಿ ಹಲವು ತುರ್ತು ಪ್ರಕರಣಗಳಿಗೆ ಸ್ಪಂದಿಸಿದ್ದಾರೆ. ಈ ರೀತಿ ಚಿಕಿತ್ಸೆಗೆ ಆಗಮಿಸುವ ಪಾಕ್ ಪ್ರಜೆಗಳು ಕೊಟ್ಯಂತರ ಭಾರತೀಯರ ಹೃದಯ ಗೆದ್ದಿರುವುದಂತು ಸುಳ್ಳಲ್ಲ.

click me!