ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

By Suvarna Web DeskFirst Published Oct 19, 2017, 4:30 PM IST
Highlights

ಬಿಎಸ್ಎಫ್ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಪ್ರಧಾನಿ ಮೋದಿ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್ ಕಣಿವೆಗೆ ತೆರಳಿದ ಪ್ರಧಾನಿ ಮೋದಿ, ಯೋಧರೊಂದಿಗೆ ಸುಮಾರು 2 ತಾಸುಗಳನ್ನು ಕಳೆದರು.

ಬಂಡಿಪೋರಾ: ಬಿಎಸ್ಎಫ್ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಪ್ರಧಾನಿ ಮೋದಿ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್ ಕಣಿವೆಗೆ ತೆರಳಿದ ಪ್ರಧಾನಿ ಮೋದಿ, ಯೋಧರೊಂದಿಗೆ ಸುಮಾರು 2 ತಾಸುಗಳನ್ನು ಕಳೆದರು.

ಯೋಧರು ತನ್ನ ಕುಟುಂಬ ಸದಸ್ಯರಿದ್ದಂತೆ ಎಂದ ಪ್ರಧಾನಿ ಮೋದಿ, ಯೋಧರ ಜೊತೆ ಸಮಯ ಕಳೆಯುವುದರಿಂದ ಹೊಸ  ಚೈತನ್ಯ ಸಿಗುತ್ತದೆ ಎಂದು  ಈ ಸಂದರ್ಭದಲ್ಲಿ ಹೇಳಿದ್ದಾರೆ.

Spending time with our Forces gives me new energy. We exchanged sweets & interacted. Happy to know the Jawans practice Yoga regularly. pic.twitter.com/zvHmaO8bPv

— Narendra Modi (@narendramodi)

ಯೋಧರೊಂದಿಗೆ ಇಂದು ಮಾತುಕತೆ ನಡೆಸಿದೆ, ಯೋಧರು ಪ್ರತಿದಿನ ಯೋಗಾಭ್ಯಾಸ ನಡೆಸುತ್ತಾರೆಂದು ತಿಳಿದು ಸಂತೋಷವಾಯಿತು ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

ಸೇನೆ ಹಾಗೂ ಯೋಧರ ಶ್ರೇಯೋಭಿವೃದ್ಧಿಗೆ ಸರ್ಕಾರವು ಬದ್ಧವಾಗಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

click me!