
ಬಂಡಿಪೋರಾ, ಜಮ್ಮು ಮತ್ತು ಕಾಶ್ಮೀರ: ಬಹಳ ಸಮಯದಿಂದ ಬಾಕಿವುಳಿದಿರುವ ಏಕ ಶ್ರೇಣಿ- ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ನನ್ನ ಆಸೆ. ಆದರೆ, ದುರಾದೃಷ್ಟವಶಾತ್ ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಆದುದರಿಂದ ಅದನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದೆಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್ ಕಣಿವೆಗೆ ತೆರಳಿದ ಪ್ರಧಾನಿ ಮೋದಿ, ಯೋಧರೊಂದಿಗೆ ಸುಮಾರು 2 ತಾಸುಗಳನ್ನು ಕಳೆದು, ಸಿಹಿ ತಿನ್ನಿಸುವ ಮೂಲಕ ಆಚರಿಸಿದರು.
ಸೇನೆ ಹಾಗೂ ಯೋಧರ ಶ್ರೇಯೋಭಿವೃದ್ಧಿಗೆ ಸರ್ಕಾರವು ಸರ್ವರೀತಿಯಲ್ಲೂ ಬದ್ಧವಾಗಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಯೋಧರ ತ್ಯಾಗ ಬಲಿದಾನಗಳನ್ನು ಪ್ರಶಂಸಿಸಿದ ಮೋದಿ, ಯೋಧರು ತನ್ನ ಕುಟುಂಬ ಸದಸ್ಯರಿದ್ದಂತೆ ಎಂದು ಹೇಳಿದ್ದಾರೆ.
ಸಮವಸ್ತ್ರ, ಅದು ಭೂಸೇನೆ, ವಾಯುಸೇನೆ ಅಥವಾ ನೌಕಾಸೇನೆ, ಯಾವುದೇ ಆಗಿರಲಿ, ಅದು ಗೌರವಕ್ಕೆ ಪಾತ್ರವಾಗಿದೆ. ಯೋಧರ ಜೊತೆ ಸಮಯ ಕಳೆಯುವುದರಿಂದ ಹೊಸ ಚೈತನ್ಯ ಸಿಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.