ಮುಂಬರುವ ಹಾರ್ಟ್ ಆಫ್ ಏಶಿಯಾ ಸಮ್ಮೇಳನಕ್ಕೆ ಸುಷ್ಮಾ ಗೈರು

Published : Nov 24, 2016, 01:04 PM ISTUpdated : Apr 11, 2018, 12:41 PM IST
ಮುಂಬರುವ ಹಾರ್ಟ್ ಆಫ್ ಏಶಿಯಾ ಸಮ್ಮೇಳನಕ್ಕೆ ಸುಷ್ಮಾ ಗೈರು

ಸಾರಾಂಶ

ದ್ವಿಪಕ್ಷೀಯ ಮಾತುಕತೆ ನಡೆಯುವಂತಾಗಲು ಅಗತ್ಯವಿರುವ ವಾತವರಣವನ್ನು ರಚಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ, ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.

ನವದೆಹಲಿ (ನ.24): ‘ಹಾರ್ಟ್ ಆಫ್ ಏಶಿಯಾ’ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸುವುದಿಲ್ಲವೆಂದು ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಆದರೆ, ಆ ಸಂದರ್ಭದಲ್ಲಿ ಪಾಕಿಸ್ತಾನ ಜತೆಗೆ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಲಿದೆಯೇ ಎಂಬ ಬಗ್ಗೆ ವಿಕಾಸ್ ಸ್ವರೂಪ್ ನಿಖರವಾದ ಮಾಹಿತಿ ನೀಡಲಿಲ್ಲ.

ದ್ವಿಪಕ್ಷೀಯ ಮಾತುಕತೆ ನಡೆಯುವಂತಾಗಲು ಅಗತ್ಯವಿರುವ ವಾತವರಣವನ್ನು ರಚಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ, ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಉರಿ ದಾಳಿ ಹಾಗೂ ಗಡಿಯಲ್ಲಿ ಪಾಕಿಸ್ತಾನವು ನಿರಂತರ ಕದನ ವಿರಾಮ ಉಲ್ಲಂಘನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವಿನ ಸಂಬಂಧ ಹದೆಗೆಟ್ಟಿದೆ. ಅದಾಗ್ಯೂ, ಭಾರತದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಶಿಯಾ’ ಸಮ್ಮೇಳನದಲ್ಲಿ ಪಾಕ್’ನ  ಹಿರಿಯ ರಾಜತಾಂತ್ರಿಕ  ಸರ್ತಾಜ್ ಅಝೀಝ್ ಭಾಗವಹಿಸಲಿದ್ದಾರೆ.

ಮುಂಬರುವ ಡಿಸೆಂಬರ್ 3 ಮತ್ತು 4 ರಂದು ಅಮೃತಸರದಲ್ಲಿ ಹಾರ್ಟ್  ಆಫ್  ಏಶಿಯಾ ಸಮ್ಮೆಳನ ನಡೆಯಲಿದೆ,

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ