
ಕರಾಚಿ(ಅ.11): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳನ್ನು ನಾಶಪಡಿಸಲು ಭಾರತ ಕಳೆದ ತಿಂಗಳಲ್ಲಿ ಸರ್ಜಿಕಲ್ ದಾಳಿ ಪಾಕಿಸ್ತಾನದಲ್ಲಿ ಭಾರೀ ಬಿರುಗಾಳಿ ಬೀಸಿದೆ.
ಭಾರತದ ಕರಾರುವಕ್ಕು ದಾಳಿ ನಂತ್ರ ಪಾಕ್ ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಹಾಗೂ ಒಡಕು ಮೂಡಿದ್ಯಂತೆ.
ಈ ಬಗ್ಗೆ ವರದಿ ಮಾಡಿದ್ದ ಪ್ರಸಿದ್ಧ ಡಾನ್ ಪತ್ರಿಕೆಯ ಪತ್ರಕರ್ತ ಸಿರಿಲ್ ಅಲ್ ಮೇಡಾ ಅವರಿಗೆ ದೇಶದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿದೆ.
ಪತ್ರಕರ್ತ ಸಿರಿಲ್ ಅಲ್ ಮೇಡಾ ಅವರ ಹೆಸರನ್ನು ‘ಎಕ್ಸಿಟ್ ಕಂಟ್ರೋಲ್ ಲಿಸ್ಟ್' ಅಂತಂದ್ರೆ ನಿರ್ಗಮನ ನಿರ್ಬಂಧ ಪಟ್ಟಿಗೆ ಸೇರಿಸಲಾಗಿದೆ.
ಇದ್ರಿಂದ ಪರ್ತಕರ್ತ ದೇಶದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿದೆ ಅಂತ ‘ದ ಕ್ವಿಂಟ್' ವರದಿ ಮಾಡಿದೆ.
ಇನ್ನು ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಿರಿಲ್, ಪಾಕಿಸ್ತಾನ ನನ್ನ ಮಾತೃಭೂಮಿ. ಯಾವ್ದೇ ಕಾರಣಕ್ಕೂ ದೇಶ ಬಿಡಲ್ಲ ಅಂತ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.