
ನವದೆಹಲಿ(ಅ.11): ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಹಾಗೂ ಇತರೆ ಮೂವರ ಮೇಲೆ ವಂಚನೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡೆನಿಜ್ ಆರೋರ್ ಎಂಬುವವರು ತಮಗೆ ರಿತಿ ಎಂಎಸ್'ಡಿ ಅಲ್ಮೋಡ್ ಪ್ರೈ.ಲಿ ಕಂಪೆನಿಯ ನಿರ್ಧೇಶಕರಾಗಿರುವ ಸಾಕ್ಷಿ ಧೋನಿ ಹಾಘೂ ಅರುಣ್ ಪಾಂಡೆ, ಶಭಾವತಿ ಪಾಂಡೆ ಮತ್ತು ಪ್ರತಿಮಾ ಪಾಂಡೆ ಸ್ಪೋರ್ಟ್ಸ್ ಫಿಟ್ ಸಂಸ್ಥೆಯಲ್ಲಿ ತನಗೆ ಸೇರಬೇಕಾಗಿದ್ದ ಷೇರಿನ ಹಣವನ್ನು ನೀಡದೇ ವಂಚಿಸಿದ್ದಾರೆ ಎಂದು ದೋರಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 420 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂಎಸ್'ಡಿ ಅಲ್ಮೋಡ ಕಂಪನಿಯ ನಿರ್ದೆಶಕರು ತಮಗೆ 11 ಕೋಟಿ ರೂಪಾಯಿ ನೀಡಬೇಕಾಗಿತ್ತು. ಆದರೆ ನನಗೆ ಕೇವಲ 2.25 ಕೋಟಿ ರೂಪಾಯಿ ಮಾತ್ರ ನೀಡಿ ವಂಚಿಸಿದ್ದಾರೆ ಎಂದು ಅರೋರ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.