
ಬೆಂಗಳೂರು(ಜ.03): ಸಿ.ಎಂ ಇಬ್ರಾಹಿಂ ಮೇಲೆ ಕೇಳಿ ಬಂದಿರುವ ಭ್ರೂಣ ಹತ್ಯೆ ಆರೋಪ ನಂಬುವುದಕ್ಕೆ ಆಗುತ್ತಿಲ್ಲ, ಭ್ರೂಣ ಹತ್ಯೆ ಆರೋಪ ನಿಜವೇ ಆಗಿದ್ದರೆ ಖಂಡಿತಾ ಅದು ಅಕ್ಷಮ್ಯ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಅವರ ಜ್ಞಾನ, ಪಾಂಡಿತ್ಯ, ರಾಮಾಯಣ, ಮಹಾಭಾರತ ಕತೆಗಳನ್ಮ ಪಠಿಸುವ ರೀತಿ ನೋಡಿದರೆ ಇವರು ಇಂತಹ ಕೆಲಸ ಮಾಡಿದ್ದಾರಾ..? ಅನ್ನಿಸುತ್ತಿದೆ. ಆದರೆ, ಅವರ ಸಹೋದರನೇ ಇಂತದ್ದೊಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ, ಆರೋಪಕ್ಕೆ ಹೆಚ್ಚಿನ ಬಲವಿದೆ. ಸಾರ್ವಜನಿಕ ಜೀವನದಲ್ಲಿ ಇದ್ದವರು, ನುಡಿಗೆ ತಕ್ಕಂತೆ ನಡೆಯಬೇಕು, ಇಬ್ರಾಹಿಂ ಅವರಿಗೆ ಮಗಳ ಪ್ರೇಮ ವಿವಾಹ ಇಷ್ಟವಿಲ್ಲದಿದ್ದರೆ ಸುಮ್ಮನೆ ಇರಬಹುದಿತ್ತು ಎಂದು ಸಿಎಂ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.