
ನವದೆಹಲಿ(ಜ.04): ಭಾರತದ ಏಕದಿನ ಹಾಗೂ ಟಿ 20 ನಾಯಕತ್ವ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ್ದಾರೆ. ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಉಳಿಯಲು ಧೋನಿ ನಿರ್ಧರಿಸಿದ್ದಾರೆ.2014ರ ಡಿಸೆಂಬರ್‌ನಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್ ಬಳಿಕ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, ಮುಂದಿನ ವಿಶ್ವಕಪ್‌ವರೆಗೂ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸುವ ಗುರಿ ಹೊತ್ತಿದ್ದರು. 2004 ಡಿಸೆಂಬರ್ 23 ರಂದು ಬಾಂಗ್ಲಾದೇಶದ ವಿರುದ್ಧದ ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆಗೊಂಡಿದ್ದ ಅವರನ್ನು 2007 ರಲ್ಲಿ ರಾಹುಲ್ ದ್ರಾವಿಡ್ ನಂತರ ನಾಯಕರಾಗಿ ನೇಮಕ ಮಾಡಲಾಗಿತ್ತು. ಜನವರಿ 15 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕ ದಿನ ಹಾಗೂ ಟಿ-20 ಪಂದ್ಯಗಳಿಗೆ ಅವರು ನಾಯಕರಾಗಿ ಲಭ್ಯವಿರುತ್ತಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಧೋನಿ ನಾಯಕತ್ವದಲ್ಲಿ ಭಾರತ ತಂಡ 2011 ರ ಏಕದಿನ ವಿಶ್ವ ಕಪ್, 2007ರ ಟಿ20 ವಿಶ್ವಕಪ್'ಅನ್ನು ಮುಡಿಗೇರಿಸಿಕೊಂಡಿತ್ತು. 2007 ರಿಂದ 2016ರ ಅವಧಿಯಲ್ಲಿ ಧೋನಿ ನಾಯಕರಾಗಿ ಆಡಿದ 191 ಪಂದ್ಯಗಳಲ್ಲಿ ಭಾರತ ತಂಡವು 104 ಪಂದ್ಯಗಳಲ್ಲಿ ಜಯಿಸಿದ್ದು, 72 ಪಂದ್ಯಗಳಲ್ಲಿ ಪರಾಭವಗೊಂಡಿದೆ. 4 ಟೈ ಆಗಿದ್ದು, 11 ರಲ್ಲಿ ಫಲಿತಾಂಶ ಬಂದಿಲ್ಲ. ಅದೇ ರೀತಿ 62 ಟಿ20 ಪಂದ್ಯಗಳಲ್ಲಿ 36 ಗೆಲುವು, 24 ಸೋಲು, ಒಂದು ಟೈ ಹಾಗೂ ಒಂದರಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
ಧೋನಿ ನಾಯಕತ್ವದಲ್ಲಿ ಭಾರತ ತಂಡ
2007ರ ಐಸಿಸಿ ವಿಶ್ವ ಟಿ20 ಚಾಂಪಿಯನ್
2010ರ ಏಷ್ಯಾ ಕಪ್ ಕ್ರಿಕೆಟ್ ಟ್ರೋಫಿ
2011ರಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್
2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ
ಐಸಿಸಿಯ ಎಲ್ಲಾ ಮಾದರಿಯಲ್ಲೂ ಟ್ರೋಫಿ ಜಯಿಸಿದ ಮೊದಲ ನಾಯಕ ಧೋನಿ
2007ರಲ್ಲಿ ಏಕದಿನ ಮತ್ತು ಟಿ20 ತಂಡದ ನಾಯಕತ್ವ
2008, 2009ರಲ್ಲಿ ಏಕದಿನ ವರ್ಷದ ಕ್ರಿಕೆಟಿಗ ಪ್ರಶಸ್ತಿ
2007ರಲ್ಲಿ ರಾಜೀವ್ ಗಾಂಧ ಖೇಲ್ ರತ್ನ ಪ್ರಶಸ್ತಿ
2009ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ನಾಯಕ
2014ರ ಡಿ.30 ರಂದು ಟೆಸ್ಟ್ ನಾಯಕತ್ವಕ್ಕೆ ವಿದಾಯ
ಧೋನಿ ನಾಯಕತ್ವದಲ್ಲಿ ಭಾರತದ ವೈಭವ
2007 ರ ವಿಶ್ವ ಐಸಿಸಿ ಟಿ20ಯಲ್ಲಿ ಚಾಂಪಿಯನ್
2011 ರ ಐಸಿಸಿ ವಿಶ್ವ ಕಪ್‌ನಲ್ಲಿ ಚಾಂಪಿಯನ್
2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್
ಏಕದಿನ ಕ್ರಿಕೆಟ್‌ನಲ್ಲಿ ರಾಂಚಿ ಕ್ರಿಕೆಟಿಗನ ಸಾಧನೆ
ರನ್ 6633
09 ಶತಕ
61 ಅರ್ಧಶತಕ
54 ಆವರೇಜ್
86 ಸ್ಟ್ರೈಕಿಂಗ್ ರೇಟ್
ಟಿ20 ಕ್ರಿಕೆಟ್‌ನಲ್ಲಿ ರಾಂಚಿ ಕ್ರಿಕೆಟಿಗನ ಸಾಧನೆ
ರನ್ 1112
35.87 ಆವರೇಜ್
122.33 ಸ್ಟ್ರೈಕಿಂಗ್ ರೇಟ್
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.