
ನವದೆಹಲಿ (ಅ.18): ಕಾವೇರಿ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.
ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ. ತ್ರಿಸದಸ್ಯ ಪೀಠದಲ್ಲಿ ನ್ಯಾ.ದೀಪಕ್ ಮಿಶ್ರಾ, ನ್ಯಾ. ಅಮಿತ್ ರಾಯ್, ಹಾಗೂ ನ್ಯಾ.ಅಜಯ್ ಮಾನಿಕರಾವ್ ಖಾನ್ವಿಲ್ಕರ್ ಇದ್ದಾರೆ.
ಹೊಸ ತ್ರಿಸದಸ್ಯ ಪೀಠದಲ್ಲಿ ನ್ಯಾ.ಉದಯ್ ಲಲಿತ್ಗೆ ಸ್ಥಾನ ಇಲ್ಲ. ನ್ಯಾ.ಉದಯ್ ಲಲಿತ್, ಜಯಲಲಿತಾ ಪರ ವಕೀಲರಾಗಿದ್ದವರು. ಆದುದರಿಂದ ಅವರು ವಿಚಾರಣೆ ನಡೆಸಬಾರದೆಂದು ಕರ್ನಾಟಕ ಮನವಿ ಸಲ್ಲಿಸಿತ್ತು.
2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಇದಾಗಿದೆ.
- 2007ರಲ್ಲಿ ನ್ಯಾಯಾಧಿಕರಣದ ಐ ತೀರ್ಪಿನಲ್ಲಾಗಿರುವ ಅನ್ಯಾಯ ವಿರೋಧಿಸಿ ವಿಶೇಷ ಮೇಲ್ಮನವಿ ಅರ್ಜಿ
- ನ್ಯಾಯಾಧಿಕರಣ 2007ರಲ್ಲಿ ನೀಡಿರುವ ತೀರ್ಪಿನ ಬಗ್ಗೆ ನಾಲ್ಕು ರಾಜ್ಯಗಳಿಂದಲೂ ಅರ್ಜಿ
- 2008ರಲ್ಲಿ ಅಂತರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ಸಲ್ಲಿಸಿರುವ ಸ್ಪಷ್ಟೀಕರಣ ಅರ್ಜಿಗಳ ವಿಚಾರಣೆ
- ರಾಜ್ಯ ಹೆಚ್ಚುವರಿಯಾಗಿ ಕೇಳುತ್ತಿರುವ 100 ಟಿಎಂಸಿ ನೀರಿನಲ್ಲಿ ಕನಿಷ್ಠ 50 ಟಿಎಂಸಿಯಾದರೂ ಸಿಗುವ ನಿರೀಕ್ಷೆ
- ಸುಪ್ರೀಂಕೋರ್ಟ್ನ ತ್ರಿಸದಸ್ಯ ನ್ಯಾಯಪೀಠದಲ್ಲಿ ನಾಲ್ಕು ರಾಜ್ಯಗಳ ವಿಶೇಷ ಮೇಲ್ಮನವಿ ವಿಚಾರಣೆ
- ದೀಪಕ್ ಮಿಶ್ರಾ, ಅಮಿಕರ ರಾಯ್, ಎ.ಎಂ. ಕಾನ್ವಿಲ್ಕರ್ ಅವರ ನ್ಯಾಯಪೀಠದಲ್ಲಿ ವಿಚಾರಣೆ
- ನ್ಯಾಯಾಧಿಕರಣ ನೀಡಿರುವ ತೀರ್ಪು ಯಾವುದೇ ರಾಜ್ಯಕ್ಕೂ ಸಮಾಧಾನ ತಂದಿಲ್ಲ
- ಅಂತಿಮ ತೀರ್ಪಿನಲ್ಲಿ ಕೇರಳಕ್ಕೆ 30, ಕರ್ನಾಟಕಕ್ಕೆ 270, ತಮಿಳುನಾಡಿಗೆ 419, ಪಾಂಡಿಚೇರಿಗೆ 7 ಟಿಎಂಸಿ ಹಂಚಿಕೆ ಮಾಡಲಾಗಿದೆ
- ಈ ಹಂಚಿಕೆಯೇ ಅವಾಸ್ತವಿಕ ಎಂಬುದು ರಾಜ್ಯದ ಮೂಲ ವಾದವಾಗಿದೆ
- ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂಬುದು ಐತೀರ್ಪಿನ ಶಿಫಾರಸ್ಸಿನಲ್ಲಿದೆ
- ತಿಂಗಳ ಕೋಟಾದಲ್ಲಿ ನೀರು ಬಿಡಬೇಕೆಂಬ ಆದೇಶ ರದ್ದು ಮಾಡಬೇಕು
- ತಮಿಳುನಾಡಿನಲ್ಲಿ ಸಿಗುವ ನೀರಿನ ಅಂಶದ ಬಗ್ಗೆ ಪರಿಗಣಿಸಬೇಕು
- ತಮಿಳುನಾಡಿಗೆ ಕಡಿಮೆ ನೀರಿನಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಸೂಚನೆ ನೀಡಬೇಕು
- ತಮಿಳುನಾಡಿನಲ್ಲಿ ಸುಮಾರು 50 ಟಿಎಂಸಿಯಷ್ಟು ಅಂತರ್ಜಲ ಲಭ್ಯ, ಅದನ್ನು ಬಳಸುವಂತೆ ಹೇಳಬೇಕು
- ತಮಿಳುನಾಡಿಗೆ ನೀಡಿರುವ ಕೋಟಾದಲ್ಲಿ ಅಷ್ಟು ಕಡಿಮೆ ಮಾಡಬೇಕು
- ತಮಿಳುನಾಡಿನಲ್ಲಿ 24 ಲಕ್ಷ ಎಕರೆಯಲ್ಲಿ ಸಾಂಬಾ ಬೆಳೆ ಇದೆ, ಅದನ್ನು 12 ಲಕ್ಷ ಎಕರೆಗೆ ಸೀಮಿತಗೊಳಿಸಬೇಕು
- ರಾಜ್ಯದಲ್ಲಿ 18 ಲಕ್ಷ ಎಕರೆಗೆ ಮಾತ್ರ ಸೀಮಿತ ಮಾಡಿರುವುದನ್ನು 24 ಲಕ್ಷ ಎಕರೆಗೆ ಹೆಚ್ಚಿಸಬೇಕು
- ಕಬ್ಬು 40 ಸಾವಿರ ಎಕರೆಗೆ ಮಾತ್ರ ಸೀಮಿತ ಮಾಡಲಾಗಿದೆ ಅದನ್ನು 70 ರಿಂದ 90 ಸಾವಿರ ಎಕರೆಗೆ ಹೆಚ್ಚಿಸಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.