ಎಸ್‌ಸಿ ಎಸ್‌ಟಿ ಬಡ್ತಿಯಲ್ಲಿ ಮೀಸಲಾತಿ ಬೇಕಿಲ್ಲ: ಸುಪ್ರೀಂ!

By Web DeskFirst Published Sep 26, 2018, 11:00 AM IST
Highlights

ಎಸ್‌ಸಿ ಎಸ್ಟಿ ಬಡ್ತಿಯಲ್ಲಿ ಮೀಸಲಾತಿ ಇಲ್ಲ! ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು! ಬಡ್ತಿಯಲ್ಲಿ ಮೀಸಲಾತಿ ಬೇಕಿಲ್ಲ ಎಂದ ಸುಪ್ರೀಂ! 2006 ರ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್! ಈ ಹಿಂದಿನ ತೀರ್ಪು ಮರುಪರಿಶೀಲಿಸುವ ಅಗತ್ಯವಿಲ್ಲ  

ನವದೆಹಲಿ(ಸೆ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಎಸ್‌ಸಿ ಎಸ್‌ಟಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್  ತೀರ್ಪು ಹೊರ ಬಿದ್ದಿದೆ. ಬಡ್ತಿಯಲ್ಲಿ ಮೀಸಲಾತಿ ನಿಡುವ ಅಗತ್ಯವಿಲ್ಲ ಎಂದು ಸುಪ್ರೀಂ ಆದೇಶ ನೀಡಿದೆ.

ಎಸ್‌ಸಿ ಎಸ್‌ಟಿ ಬಡ್ತಿ ಕುರಿತು ಸುಪ್ರೀಂ 2006 ರಲ್ಲಿಯೇ ತೀರ್ಪು ನಿಡಿದ್ದು, ಅದನ್ನು ಮತ್ತೆ ಪುನರ್ ಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. 

ಎಸ್‌ಸಿ ಎಸ್‌ಟಿ ನೌಕರರ ಮುಂಬಂಡ್ತಿ ಕುರಿತು ಎಂ ನಾಗರಾಜ್ ಪ್ರಕರಣದ ಮರು ಪರಿಶೀಲನೆ ಅಗತ್ಯವಿಲ್ಲ ಎಂದು ನ್ಯಾ. ನಾರಿಮನ್ ಸ್ಪಷ್ಟಪಡಿಸಿದ್ದಾರೆ. ಹಿಂದುಳಿದವರು ಎಂದು ಹೇಳಲು ಮಾಹಿತಿ  ಸಂಗ್ರಹ ಅಗತ್ಯವಿಲ್ಲ ಎಂದು ಸುಪ್ರೀಂ ಹೇಳಿದ್ದು, ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪು ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

click me!