ಲಾಲೂಗೆ ಮತ್ತೆ ಸಂಕಷ್ಟ: ಕ್ರಿಮಿನಲ್ ಸಂಚು ಕೈಬಿಡಲು ಸಾಧ್ಯವಿಲ್ಲ ಎಂದ ಕೋರ್ಟ್

Published : May 08, 2017, 06:21 AM ISTUpdated : Apr 11, 2018, 01:06 PM IST
ಲಾಲೂಗೆ ಮತ್ತೆ ಸಂಕಷ್ಟ: ಕ್ರಿಮಿನಲ್ ಸಂಚು ಕೈಬಿಡಲು ಸಾಧ್ಯವಿಲ್ಲ ಎಂದ ಕೋರ್ಟ್

ಸಾರಾಂಶ

ಖಜಾನೆಯಿಂದ 37.7 ಕೋಟಿ ಹಣ ಅಕ್ರಮವಾಗಿ ತೆಗೆದ ಆರೋಪಕ್ಕೆ ಸಂಬಂಧಿಸಿದಂತೆ ಲಾಲೂ ದೋಷಿ ಎಂದು ಸಿಬಿಐ ಕೋರ್ಟ್​ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಜಾರ್ಖಂಡ್​ ಹೈಕೋರ್ಟ್​ನಲ್ಲಿ ಲಾಲೂ ಅರ್ಜಿ ಸಲ್ಲಿಸಿದ್ದರು. ಜಾರ್ಖಂಡ್​ ಹೈಕೋರ್ಟ್ ಲಾಲೂರನ್ನು ಖುಲಾಸೆಗೊಳಿಸಿತ್ತು.

ನವದೆಹಲಿ(ಮೇ.08): 945 ಕೋಟಿ ರೂಪಾಯಿಗಳ ಮೇವು ಹಗರಣ ಸಂಬಂಧ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ಗೆ ಸಂಕಷ್ಟ ಎದುರಾಗಿದೆ. ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. 945 ಕೋಟಿ ಮೇವು ಹಗರಣದಲ್ಲಿ ಲಾಲೂ ಅಪರಾಧಿ. ಪ್ರತಿ ಕೇಸ್​ನ ಪ್ರತ್ಯೇಕ ವಿಚಾರಣೆಗೆ ಸುಪ್ರೀಂಕೋರ್ಟ್​ ಸೂಚನೆ ನೀಡಿದ್ದು, ಕ್ರಿಮಿನಲ್ ಸಂಚು ಆರೋಪದಲ್ಲಿ ವಿಚಾರಣೆಗೆ ಆದೇಶಿಸಿದೆ. ಈ ಮೂಲಕ ಲಾಲೂ ಮೇಲೆ ಇರುವ ಎಲ್ಲ ಆರೋಪಗಳ ಪ್ರತ್ಯೇಕ ವಿಚಾರಣೆ ನಡೆಯಲಿದೆ. ಸಿಬಿಐ ತನ್ನ ತನಿಖೆಯನ್ನು ಮುಂದುವರೆಸಬುಹದು ಅಂತಾನೂ ಹೇಳಿದ್ದು, ಆರ್​ಜೆಡಿ ಮುಖ್ಯಸ್ಥರಿಗೆ ಭಾರೀ ಸಂಕಷ್ಟ ಎದುರಾಗಿದೆ.

ಖಜಾನೆಯಿಂದ 37.7 ಕೋಟಿ ಹಣ ಅಕ್ರಮವಾಗಿ ತೆಗೆದ ಆರೋಪಕ್ಕೆ ಸಂಬಂಧಿಸಿದಂತೆ ಲಾಲೂ ದೋಷಿ ಎಂದು ಸಿಬಿಐ ಕೋರ್ಟ್​ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಜಾರ್ಖಂಡ್​ ಹೈಕೋರ್ಟ್​ನಲ್ಲಿ ಲಾಲೂ ಅರ್ಜಿ ಸಲ್ಲಿಸಿದ್ದರು. ಜಾರ್ಖಂಡ್​ ಹೈಕೋರ್ಟ್ ಲಾಲೂರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಿಬಿಐ ಅರ್ಜಿ ಸಲ್ಲಿಸಿತ್ತು.

ಲಾಲು ಪ್ರಸಾದ್ ಅವರಿಗೆ ಮೇವು ಪ್ರಕರಣಕ್ಕೆ ಸಂಬಂಧಿಸಿದಂತೆ 2013 ಅಕ್ಟೋಬರ್'ನಲ್ಲಿ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಜೊತೆಗೆ ಚುನಾವಣೆಗೆ ಸ್ಪರ್ಧಿಸಲು ಕೂಡ ಅನರ್ಹಗೊಂಡಿದ್ದರು. ನಂತರ ಜಾಮೀನು ಪಡೆದುಕೊಂಡಿದ್ದರು.ಅವಿಭಜಿತ ಬಿಹಾರ್'ನಲ್ಲಿ 1990ರ ದಶಕದಲ್ಲಿ ಲಾಲು ಪ್ರಸಾದ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1 ಸಾವಿರ ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದ ಮೇವು ಹಗರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಹಗರಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!