ಕಾಶ್ಮೀರದಲ್ಲಿ ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಜ್; ಇದು ಐಫೆಲ್ ಟವರ್'ಗಿಂತಲೂ ಎತ್ತರದ್ದು

By Suvarna Web DeskFirst Published May 8, 2017, 5:46 AM IST
Highlights

ಸೇತುವೆ ನಿರ್ಮಾಣಕ್ಕೆ 2019ರ ಮಾರ್ಚ್'ನ್ನು ಡೆಡ್'ಲೈನ್ ಆಗಿ ಇಡಲಾಗಿದೆ. ನಿತ್ಯವೂ 1,400 ಜನರು ಕೆಲಸ ಮಾಡುತ್ತಿದ್ದಾರೆ. ಸೇತುವೆ ನಿರ್ಮಾಣದ ಸ್ಥಳವು ಬಹಳ ದುರ್ಗಮ ಪ್ರದೇಶವಾಗಿದ್ದು, ರಸ್ತೆ ಸೌಕರ್ಯವೇ ಇರಲಿಲ್ಲ. ಯೋಜನೆ ಆರಂಭಕ್ಕೂ ಮುನ್ನ ಸ್ಥಳದಿಂದ 22 ಕಿಮೀ ದೂರದವರೆಗೂ ರಸ್ತೆ ನಿರ್ಮಾಣ ಮಾಡಲಾಯಿತು. ಸೇತುವೆಯ ರಕ್ಷಣೆಗಾಗಿ ವೈಮಾನಿಕ ಭದ್ರತಾ ವ್ಯವಸ್ಥೆ ನಿರ್ಮಿಸುವುದೂ ಕೂಡ ಯೋಜನೆಯ ಒಂದು ಭಾಗವಾಗಿದೆ.

ನವದೆಹಲಿ(ಮೇ 08): ಜಮ್ಮು-ಕಾಶ್ಮೀರದಲ್ಲಿ ಹೊಸ ರೈಲ್ವೆ ಸೇತುವೆಯ ನಿರ್ಮಾಣ ನಡೆಯುತ್ತಿದೆ. ಚೇನಾಬ್ ನದಿಯ ಮೇಲೆ ಕಟ್ಟಲಾಗುತ್ತಿರುವ ಇದು ವಿಶ್ವದ ಅತ್ಯಂತ ಎತ್ತರದ ರೈಲ್ವೆ ಬ್ರಿಜ್ ಎನಿಸಲಿದೆ. ಫ್ರಾನ್ಸ್'ನ ಐಫೆಲ್ ಟವರ್'ಗಿಂತಲೂ ಇದು ಎತ್ತರವಿರಲಿದೆ. 1.3 ಕಿಮೀ ಉದ್ದದ ಈ ಸೇತುವೆ ನಿರ್ಮಾಣದಿಂದ ಕಾಶ್ಮೀರಿಗರಿಗೆ ಹಲವು ಅನುಕೂಲಗಳಾಗಲಿವೆ.

ಮುಖ್ಯಾಂಶಗಳು

1) ಫಿನ್'ಲ್ಯಾಂಡ್ ಮತ್ತು ಜರ್ಮನಿ ದೇಶದ ತಜ್ಞರು ಈ ರೈಲ್ವೆ ಸೇತುವೆ ಯೋಜನೆಯ ವಿನ್ಯಾಸ ಮಾಡಿದ್ದಾರೆ.

2) 1.315 ಉದ್ದದ ಈ ಸೇತುವೆಯು 359 ಮೀಟರ್ ಎತ್ತರವಿರಲಿದೆ. ಐಫೆಲ್ ಟವರ್'ಗಿಂತಲೂ ಇದು 35 ಮೀಟರ್ ಎತ್ತರವಿದೆ.

3) ಸೇತುವೆ ನಿರ್ಮಾಣದಿಂದ ಕಾಟ್ರಾ ಮತ್ತು ಬಾನಿಹಾಲ್ ಮಧ್ಯದ 111 ಕಿಮೀ ಮಾರ್ಗದಲ್ಲಿ ರೈಲು ಸಂಚಾರ ಸುಗಮಗೊಳ್ಳಲಿದೆ.

4) ಈ ಪ್ರದೇಶವು ಭೂಕಂಪಸೂಕ್ಷ್ಮವಾಗಿರುವುದರಿಂದ, ಡಿಆರ್'ಡಿಓ ಸಂಸ್ಥೆ ಕೂಡ ಈ ಯೋಜನೆಯಲ್ಲಿ ಭಾಗಿಯಾಗಿದೆ.

5) ಯೋಜನೆಯ ಒಟ್ಟು ಅಂದಾಜು ವೆಚ್ಚ 12,000 ಕೋಟಿ ರು.

6) ಸೇತುವೆ ನಿರ್ಮಾಣಕ್ಕೆ 2019ರ ಮಾರ್ಚ್'ನ್ನು ಡೆಡ್'ಲೈನ್ ಆಗಿ ಇಡಲಾಗಿದೆ. ನಿತ್ಯವೂ 1,400 ಜನರು ಕೆಲಸ ಮಾಡುತ್ತಿದ್ದಾರೆ.

7) ಸೇತುವೆ ನಿರ್ಮಾಣದ ಸ್ಥಳವು ಬಹಳ ದುರ್ಗಮ ಪ್ರದೇಶವಾಗಿದ್ದು, ರಸ್ತೆ ಸೌಕರ್ಯವೇ ಇರಲಿಲ್ಲ. ಯೋಜನೆ ಆರಂಭಕ್ಕೂ ಮುನ್ನ ಸ್ಥಳದಿಂದ 22 ಕಿಮೀ ದೂರದವರೆಗೂ ರಸ್ತೆ ನಿರ್ಮಾಣ ಮಾಡಲಾಯಿತು.

8) ಸೇತುವೆಯ ರಕ್ಷಣೆಗಾಗಿ ವೈಮಾನಿಕ ಭದ್ರತಾ ವ್ಯವಸ್ಥೆ ನಿರ್ಮಿಸುವುದೂ ಕೂಡ ಯೋಜನೆಯ ಒಂದು ಭಾಗವಾಗಿದೆ.

9) ತುರ್ತು ಸಂದರ್ಭಗಳಲ್ಲಿ ಟ್ರೈನು ಮತ್ತು ಪ್ರಯಾಣಿಕರ ಭದ್ರತೆಗಾಗಿ ಸೇತುವೆಯಲ್ಲಿ ಆನ್'ಲೈನ್ ಮಾನಿಟರಿಂಗ್ ಮತ್ತು ವಾರ್ನಿಂಗ್ ಸಿಸ್ಟಂ ಅಳವಡಿಸಲಾಗುವುದು.

10) ರೈಲ್ವೆ ಸೇತುವೆ ಬದಿಯಲ್ಲೇ ಫುಟ್'ಪಾಥ್ ಮತ್ತು ಸೈಕಲ್ ಪಥವನ್ನು ನಿರ್ಮಿಸಲಾಗುವುದು.

11) ಕಣಿವೆ ರಾಜ್ಯದಲ್ಲಿ ಹವಾಮಾನ ವೈಪರೀತ್ಯವಿರುವ ಹಿನ್ನೆಲೆಯಲ್ಲಿ ಗಾಳಿಯ ವೇಗವನ್ನು ಪತ್ತೆಹಚ್ಚುವ ಸೆನ್ಸಾರ್'ಗಳನ್ನು ಸೇತುವೆಯಲ್ಲಿ ಅಳವಡಿಸಲಾಗುವುದು. ಗಾಳಿಯ ವೇಗವು 90 ಕಿಮೀ ದಾಟಿದರೆ ರೈಲ್ವೆ ಹಳಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ರೈಲನ್ನು ನಿಲ್ಲಿಸಲು ಇದು ಸಿಗ್ನಲ್ ಆಗಿರುತ್ತದೆ.

12) ಸೇತುವೆಯ ಪರೀಕ್ಷೆ ಮತ್ತು ದುರಸ್ತಿಗೆ ಅನುಕೂಲವಾಗಲೆಂದು ರೋಪ್'ವೇ ಕೂಡ ಅಳವಡಿಸಲಾಗುವುದು.

13) ಸೇತುವೆ ನಿರ್ಮಾಣಕ್ಕಾಗಿ 24 ಸಾವಿರ ಟನ್'ಗಿಂತಲೂ ಹೆಚ್ಚು ಉಕ್ಕನ್ನು ಬಳಸಲಾಗುತ್ತದೆ.

(ಮಾಹಿತಿ: ಝೀ ಮೀಡಿಯಾ)

click me!